![](https://kannadadunia.com/wp-content/uploads/2023/07/police-crime.png)
ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಗುತ್ತಿಗೆದಾರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತುಮಕೂರಿನ ಭೀಮಸಂದ್ರ ಸಮೀಪದ ಬೆತ್ತಲೂರಿನಲ್ಲಿ ಘಟನೆ ನಡೆದಿದೆ.
ಕಟ್ಟಡ ಗುತ್ತಿಗೆದಾರ ನಿರಂಜನ್(35) ಕೊಲೆಯಾದವರು ಎಂದು ಹೇಳಲಾಗಿದೆ. ರೌಡಿಶೀಟರ್ ಮಧು ಮತ್ತು ಆತನ ಸಹಚರರು ಕೃತ್ಯವೆಸಗಿದ ಆರೋಪ ಕೇಳಿ ಬಂದಿದೆ. ಮಾರಕಾಸ್ತ್ರಗಳಿಂದ ನಿರಂಜನ್ ಕೊಲೆಗೈದ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.