
ತುಮಕೂರು: ಖಾಸಗಿ ಬಸ್ ಡಿಕ್ಕಿಯಾಗಿ ತಂದೆ, ಮಗಳು ಸಾವನ್ನಪ್ಪಿದ ಘಟನೆ ತುಮಕೂರು ತಾಲೂಕಿನ ಹೆಬ್ಬೂರು ಸಮೀಪ ಬನ್ನಿಮರದಕಟ್ಟೆ ಬಳಿ ನಡೆದಿದೆ.
ತಿರುಮಲೇಗೌಡ(50), ಚಂದನಾ(20) ಮೃತಪಟ್ಟವರು ಎಂದು ಹೇಳಲಾಗಿದೆ. ಅಪಘಾತದಲ್ಲಿ ತಿರುಮಲೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಕರೆದುಯುವ ಮಾರ್ಗ ಮಧ್ಯೆ ಚಂದನಾ ಸಾವನ್ನಪ್ಪಿದ್ದಾರೆ.
ಗುಬ್ಬಿ ತಾಲೂಕಿನ ನೆಟ್ಟಿಗೆರೆ ನಿವಾಸಿಗಳಾಗಿರುವ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಊರಿನಲ್ಲಿ ಹಬ್ಬ ಮುಗಿಸಿಕೊಂಡು ಬೈಕ್ ನಲ್ಲಿ ವಾಪಸ್ ಬೆಂಗಳೂರಿಗೆ ತೆರಳುವಾಗ ಅಪಘಾತ ಸಂಭವಿಸಿದೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.