ತುಮಕೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಹೊಸವರ್ಷವನ್ನು ಬರಮಾಡಿಕೊಳ್ಳಲು ಜನರು ತುದಿಗಾಗಲ್ಲಿ ನಿಂತು ಕಾಯುತ್ತಿದ್ದಾರೆ. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭರ್ಜರಿ ಪಾರ್ಟಿ ಮೂಡ್ ನಲ್ಲಿದ್ದವರಿಗೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಬಿಗ್ ಶಾಕ್ ನೀಡಿದ್ದಾರೆ.
ಜಿಲ್ಲೆಯಲ್ಲಿ ಪೊಲೀಸ್ ಅನುಮತಿ ಇಲ್ಲದೇ ಯಾವುದೇ ಪಾರ್ಟಿ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಎಸ್.ಪಿ ಅಶೋಕ್ ವೆಂಕಟ್ ಖಡಕ್ ಸೂಚನೆ ನೀಡಿದ್ದಾರೆ.
ಹೋಟೆಲ್, ರೆಸ್ಟೋರೆಂಟ್ ಗಳು ಅನುಮತಿ ಪಡೆದಿರಬೇಕು. ಅನುಮತಿ ಪಡೆದರೂ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗುವುದು. ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುವಂತಿಲ್ಲ. ತ್ರಿಬಲ್ ರೈಡಿಂಗ್ ಮಾಡುವಂತಿಲ್ಲ. ಬೈಕ್ ವ್ಹೀಲಿಂಗ್, ಸಿಗ್ನಲ್ ಜಂಪ್, ಕರ್ಕಶ ಶಬ್ದ ಮಾಡಿದ್ರೆ ಪ್ರಕರಣ ದಾಖಲಿಸಲಾಗುವುದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಜಿಲ್ಲೆಯಾದ್ಯಂತ ವಾಹನ ತಪಾಸಣೆ ನಡೆಸಲಾಗುವುದು. ಡ್ರಗ್ಸ್ ಮಾರಾಟ ಮಾಡಿದರೆ, ಡ್ರಗ್ಸ್ ಸೇವಿಸಿ ವಾಹನ ಚಲಾವಣೆ ಕಂಡುಬಂದರೆ ಕೇಸ್ ದಾಖಲಿಸಲಾಗುವುದು, ಅರಣ್ಯ ಪ್ರದೇಶಗಳ ಪ್ರವೇಶಕ್ಕೆ ಅನುಮತಿ ಇಲ್ಲ. ಜಿಲ್ಲೆಯಾದ್ಯಂತ ಪೊಲೀಸ್ ನಿಗಾ ವಹಿಸಲಾಗುವುದು ಎಂದು ಹೇಳಿದ್ದಾರೆ.