ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ವಿಶೇಷ ಮಹತ್ವವಿದೆ. ತುಳಸಿ ವಿವಾಹವನ್ನು ಕಾರ್ತಿಕ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 5ರಂದು ತುಳಸಿ ವಿವಾಹವನ್ನು ಆಚರಿಸಲಾಗ್ತದೆ. ಈ ದಿನದಂದು ತುಳಸಿ ಮದುವೆ ಮಾಡುವ ಮೂಲಕ ತಾಯಿ ಲಕ್ಷ್ಮಿ ಮತ್ತು ಭಗವಂತ ವಿಷ್ಣುವಿನ ಆಶೀರ್ವಾದ ಪಡೆಯಲಾಗುತ್ತದೆ. ತುಳಸಿ ಜೊತೆ ಸಾಲಿಗ್ರಾಮವನ್ನಿಟ್ಟು ಮದುವೆ ಮಾಡಲಾಗುತ್ತದೆ. ತುಳಸಿ ಮದುವೆ ನಂತ್ರ ಮದುವೆ ಸಮಾರಂಭಗಳು ಶುರುವಾಗುತ್ತವೆ.
ತುಳಸಿ ವಿವಾಹದ ದಿನ, ಮದುವೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ರೆ ಈ ಬಾರಿ ತುಳಸಿ ವಿವಾಹದ ದಿನ ಯಾವುದೇ ಮದುವೆ ಮುಹೂರ್ತವಿಲ್ಲ. ತುಳಸಿ ಮದುವೆಯನ್ನು ಪ್ರತಿಯೊಬ್ಬರ ಮನೆಯಲ್ಲೂ ಮಾಡಬೇಕು. ಇದ್ರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ. ವೈವಾಹಿಕ ಜೀವನದ ತೊಂದರೆಗಳಿಗೆ ಮುಕ್ತಿ ಸಿಗುತ್ತದೆ.
ತುಳಸಿ ಮದುವೆ ದಿನ ತುಳಸಿ ಮಾತೆಗೆ ಕೆಂಪು ಚುನ್ರಿಯನ್ನು ಅರ್ಪಿಸಿದ್ರೆ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ. ಪತಿ-ಪತ್ನಿಯರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ತುಳಸಿ ವಿವಾಹದ ದಿನ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ನಂತರ ಈ ನೀರನ್ನು ಮನೆಯಲ್ಲೆಲ್ಲಾ ಚಿಮುಕಿಸಬೇಕು. ಇದರಿಂದ ದಂಪತಿ ಮಧ್ಯೆ ನಕಾರಾತ್ಮಕತೆ ದೂರವಾಗುತ್ತದೆ. ತುಳಸಿ ಮದುವೆ ದಿನ ಮಂಗಳಾಷ್ಟಕವನ್ನು ಓದಿದ್ರೆ ಶೀಘ್ರ ಮದುವೆಯಾಗುತ್ತದೆ.