ಪ್ರತಿ ಹಿಂದೂ ಮನೆಯ ಅಂಗಳದಲ್ಲಿ ತುಳಸಿ ಗಿಡದ ಪ್ರತಿಷ್ಟಾಪನೆಯಾಗಿಯೇ ಇರುತ್ತೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ದೇವತೆಯ ಸ್ಥಾನವನ್ನು ನೀಡಲಾಗಿದೆ. ಈ ತುಳಸಿ ಗಿಡವು ಧಾರ್ಮಿಕವಾಗಿ ಮಹತ್ವವನ್ನು ಪಡೆದಿರೋದ್ರ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವವನ್ನು ಪಡೆದಿದೆ. ತುಳಸಿಗೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವಿದೆ.
ತುಳಸಿ ಬೀಜ ಅಥವಾ ತುಳಸಿ ಎಲೆಯು ಆರೋಗ್ಯ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇದೊಂದು ಅತ್ಯಮೂಲ್ಯ ಗಿಡಮೂಲಿಕೆಯಾಗಿದೆ. ತುಳಸಿಯು ಎ, ಸಿ, ಇ, ಕೆ ಹಾಗೂ ಒಮೆಗಾ 3 ಘಟಕಗಳನ್ನು ಹೊಂದಿದೆ. ಇದು ಮಾತ್ರವಲ್ಲದೇ ಕ್ಯಾಲ್ಶಿಯಂ, ಮ್ಯಾಂಗನೀಸ್, ಜಿಂಕ್ ಹಾಗೂ ಪೋಟ್ಯಾಷಿಯಂ ಕೂಡ ಅಗಾಧ ಪ್ರಮಾಣದಲ್ಲಿದೆ.
ಪ್ರಾಚೀನ ಆರ್ಯುವೇದ ಗಿಡಮೂಲಿಕೆಯನ್ನು ಉರಿಯೂತ, ಆಂಟಿ ಆಕ್ಸಿಡಂಟ್, ರೋಗನಿರೋಧಕ ಬೂಸ್ಟರ್ ಹಾಗೂ ರಕ್ತನಾಳ ರಕ್ಷಕನಾಗಿ ಬಳಕೆ ಮಾಡಲಾಗುತ್ತೆ. ಜೀರ್ಣಕ್ರಿಯೆ ಹೆಚ್ಚಿಸಲು, ತೂಕ ಇಳಿಕೆ ಮಾಡಲು ಕೂಡ ತುಳಸಿ ಎಲೆಯನ್ನು ಬಳಕೆ ಮಾಡಬಹುದಾಗಿದೆ.