ಹಿಂದೂ ಧರ್ಮದಲ್ಲಿ ತುಳಸಿ ಎಲೆಗಳಿಗೆ ತುಂಬಾನೇ ಮಹತ್ವವಿದೆ. ಹಿಂದೂ ಧರ್ಮವನ್ನ ಪಾಲಿಸುವ ಎಲ್ಲರ ಮನೆಯ ಮುಂದೂ ತುಳಸಿ ಗಿಡಗಳು ಇರೋದು ಸರ್ವೇ ಸಾಮಾನ್ಯ. ತುಳಸಿ ದೈವಿಕವಾಗಿ ಇಷ್ಟೊಂದು ಪ್ರಾಮುಖ್ಯತೆ ಪಡೆಯೋದ್ರ ಜೊತೆಗೆ ಔಷಧೀಯ ಸಸ್ಯವಾಗಿಯೂ ತುಂಬಾನೇ ಉಪಕಾರಿಯಾಗಿದೆ. ತುಳಸಿ ಸೇವನೆಯಿಂದ ನೀವು ಅನೇಕ ಕಾಯಿಲೆಗಳಿಂದ ದೂರ ಇರಬಹುದಾಗಿದೆ.
ಶೀತ : ಜ್ವರ ಹಾಗೂ ಶೀತದ ವಿರುದ್ಧದ ಮನೆ ಮದ್ದಿಗೆ ತುಳಸಿ ತುಂಬಾನೇ ಸಹಕಾರಿ. ಇದಕ್ಕಾಗಿ ನೀವು ನೀರಿನಲ್ಲಿ ತುಳಸಿ ಎಲೆಯನ್ನ ಹಾಕಿ ಚೆನ್ನಾಗಿ ಕಾಯಿಸಿ ಈ ನೀರನ್ನ ಸೇವಿಸಬೇಕು. ಇದನ್ನ ಹೊರತುಪಡಿಸಿ ನೀವು ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನ ಸೇವಿಸಬಹುದು.
ತಲೆನೋವು: ತಲೆನೋವಿನಂತಹ ಸಮಸ್ಯೆಗೆ ತುಳಸಿ ಎಲೆ ರಾಮಬಾಣವಾಗಿದೆ. ತುಳಸಿ ಹಾಗೂ ಗಂಧದಿಂದ ಮಾಡಿದ ಪೇಸ್ಟ್ನ್ನು ತಲೆಗೆ ಹಚ್ಚಿಕೊಂಡಲ್ಲಿ ತಲೆನೋವಿನಿಂದ ಮುಕ್ತಿ ಸಿಗಲಿದೆ.
ಹೊಟ್ಟೆನೋವು: ಹೊಟ್ಟೆ ನೋವಿನ ಸಮಸ್ಯೆ ವಾಸಿ ಮಾಡಲು ನೀವು ತುಳಸಿ ಎಲೆಗಳನ್ನ ಸೇವಿಸಬಹುದಾಗಿದೆ. ತುಳಸಿ ಎಲೆಗಳಲ್ಲಿ ಜೀರ್ಣಶಕ್ತಿಯನ್ನ ಚುರುಕುಗೊಳಿಸುವ ಶಕ್ತಿ ಇದೆ. ಇದ್ದಾಗಿ ನೀವು ಒಂದು ಚಮಚ ತುಳಸಿ ಎಲೆ ರಸ ಹಾಗೂ 1 ಚಮಚ ಶುಂಠಿ ರಸವನ್ನ ಮಿಶ್ರಣ ಮಾಡಿ ಸೇವಿಸಿ. ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆನೋವಿಗೂ ನೀವು ತುಳಸಿ ಎಲೆಯನ್ನ ಬಳಕೆ ಮಾಡಬಹುದು
ತ್ವಚೆಯ ಆರೈಕೆ : ತುಳಸಿ ಎಲೆಗಳು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿರುವ ಲಿನೊಲೈಕ್ ಆಸಿಡ್ ಅಂಶ ತ್ವಚೆಯ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದಕ್ಕಾಗಿ ನೀವು ತುಳಸಿ ಎಲೆಯ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ನೀರು ಹಾಗೂ ಕಡ್ಲೆ ಹಿಟ್ಟನ್ನ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ.
ಇನ್ನುಳಿದಂತೆ ಮಧುಮೇಹಿಗಳು ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರೂ ಸಹ ತುಳಸಿ ಸೇವನೆ ಮಾಡೋದ್ರ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.