ಮಂಗಳವಾರ ಭಗವಂತ ಹನುಮಂತನಿಗೆ ಮೀಸಲು. ಆ ದಿನ ಹನುಮಂತನ ಧ್ಯಾನ ಮಾಡಿದ್ರೆ ಸಕಲ ಸೌಲಭ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಮಂಗಳವಾರ ಹನುಮಂತನ ಪೂಜೆ ಮಾಡಲಾಗುತ್ತದೆ. ಕಲಿಯುಗದಲ್ಲಿ ಬೇಗ ಕೃಪೆ ತೋರುವ ದೇವರೆಂದ್ರೆ ಹನುಮಂತ ಎಂಬ ನಂಬಿಕೆಯೂ ಇದೆ.
ಹನುಮಂತನ ಆರಾಧನೆ ಮಾಡಿದ್ರೆ ಭಯ ಮಾಯವಾಗುತ್ತದೆ. ಭಕ್ತರು ರೋಗ, ಭೂತ, ಪಿಶಾಚಿ ಭಯದಿಂದ ಮುಕ್ತಿ ಪಡೆಯುತ್ತಾರೆ. ಜಾತಕದಲ್ಲಿ ಮಂಗಳ ದುರ್ಬಲವಾಗಿದ್ದರೆ ಸಮಸ್ಯೆ ಎದುರಾಗುತ್ತದೆ. ಮಂಗಳ ದೋಷ ನಿವಾರಣೆಗೆ ಹನುಮಂತನ ಆರಾಧನೆ ಮಾಡಬೇಕು.
ಪ್ರತಿ ಮಂಗಳವಾರ ಮತ್ತು ಶನಿವಾರದಂದು ಹನುಮಂತನ ದೇವಸ್ಥಾನಕ್ಕೆ ಹೋಗಿ ಹನುಮಂತನನ್ನು ಪೂಜೆ ಮಾಡಿದ್ರೆ ಬೆಲ್ಲ, ಧಾನ್ಯಗಳನ್ನು ಅರ್ಪಿಸಬೇಕು. 21 ಮಂಗಳ ವಾರ ಹೀಗೆ ಮಾಡಬೇಕು. ಹೀಗೆ ಮಾಡಿದ್ರೆ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.
ಮಂಗಳವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ ಸಿಹಿ ವೀಳ್ಯದೆಲೆಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಗೆ ಬೇಗ ಉದ್ಯೋಗ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಮಂಗಳವಾರ ಸ್ನಾನದ ನಂತರ ಸಂಪೂರ್ಣ ಭಕ್ತಿ ಮತ್ತು ನಂಬಿಕೆಯಿಂದ ಬಜರಂಗ ಬಾಣವನ್ನು ಪಠಿಸಬೇಕು. 21 ದಿನಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತು ಈ ಆಚರಣೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಶತ್ರುಗಳ ನಾಶವಾಗುತ್ತದೆ.
ಹನುಮಂತನ ಕೃಪೆಗೆ ಪಾತ್ರರಾಗಬೇಕು ಎಂದಾದ್ರೆ ಮಂಗಳವಾರ ಬೆಳಿಗ್ಗೆ ರೊಟ್ಟಿಯನ್ನು ತಯಾರಿಸಿ, ಮೊದಲ ರೊಟ್ಟಿಯನ್ನು ಕೆಂಪು ಅಥವಾ ಗೋಧಿ ಬಣ್ಣದ ಹಸುವಿಗೆ ನೀಡಬೇಕು.
ಮಂಗಳವಾರ ಕೆಂಪು ಬಣ್ಣದ ಬಟ್ಟೆ ಧರಿಸಿ, ಹನುಮಂತನ ಆರಾಧನೆ ಮಾಡುವುದ್ರಿಂದಲೂ ಸಂತೋಷ ಸಿಗುತ್ತದೆ. ಕೆಂಪು ಬಣ್ಣದ ಹೂ, ಕೆಂಪು ಬಣ್ಣದ ಸಿಹಿಯನ್ನು ಕೂಡ ಮಂಗಳವಾರ ಹನುಮಂತನಿಗೆ ಅರ್ಪಿಸಬೇಕು.