ನಾಯಿಗಳು ಮಾಡುವ ದಾಳಿಗೆ ಇನ್ನೂ ಸರಿಯಾಗಿ ಬ್ರೇಕ್ ಬಿದ್ದಿಲ್ಲ. ಆಗಲೇ ಮಹಾರಾಷ್ಟ್ರದ ಗೊಂಡಿಯಾದಲ್ಲಿ ನಡೆದಿರುವ ಘಟನೆಯೊಂದು ಜನರನ್ನ ಇನ್ನಷ್ಟು ಬೆಚ್ಚಿಬೀಳಿಸಿದೆ. ಅಸಲಿಗೆ ಆಟ ಆಡುತ್ತಿರುವ ಮಗುವಿನ ಮೇಲೆ, ಹಂದಿಯೊಂದು ಏಕಾಏಕಿ ದಾಳಿ ಮಾಡಿ ಗಾಯಗೊಳಿಸಿದೆ.
ಇದೇ ಮಾರ್ಚ್ 13ರಂದು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಎಂದಿನಂತೆ 3-4 ಮಕ್ಕಳು ಮನೆಯ ಹೊರಗಡೆ ತಮ್ಮ ಪಾಡಿಗೆ ತಾವು ಆಟ ಆಡುತ್ತಿದ್ದರು. ಅದೇ ಸಮಯಲ್ಲಿ, ಅದೆಲ್ಲಿತ್ತೋ ಏನೋ ಹಂದಿಯೊಂದು ಏಕಾಏಕಿ ಓಡಿ ಬಂದಿದೆ. ಇಷ್ಟೆ ಆಗಿದ್ದರೆ ಒಂದು ಮಾತಿತ್ತು. ಆದರೆ ಆ ಹಂದಿ, ಅಲ್ಲೇ ಆಟ ಆಡುತ್ತಿದ್ದ ಮಗುವಿನ ಮೇಲೆ ಭಯಂಕರವಾಗಿ ದಾಳಿ ನಡೆಸಿದೆ. ಇದೇ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರಿಕಾರ್ಡ್ ಆಗಿದೆ. ಅದೆಲ್ಲಿಂದಾನೋ ಓಡಿ ಬಂದ ಹಂದಿ ಒಮ್ಮಿಂದೊಮ್ಮೆ 10 ವರ್ಷದ ಬಾಲಕನ ಮೇಲೆ ಎಗರಿ ಬಿದ್ದಿದೆ.
ಹಂದಿ ಮಾಡಿರುವ ದಾಳಿಯಿಂದಾಗಿ ಆ ಬಾಲಕನೊಬ್ಬನೆ ಅಲ್ಲ, ಇನ್ನುಳಿದ ಮಕ್ಕಳು ಸಹ ಶಾಕ್‌ನಲ್ಲಿದ್ದರು. ಆಗ ಆ ಬಾಲಕನ ಹೊರತಾಗಿ ಉಳಿದ ಮಕ್ಕಳು ಭಯದಿಂದ ಚೀರುತ್ತ, ಅವರವರ ಮನೆಗೆ ಓಡಿ ಹೋಗುತ್ತಾರೆ. ಆದರೂ ಹಂದಿ ಮಾತ್ರ ಆ ಬಾಲಕನನ್ನ ಬಿಟ್ಟಿರಲಿಲ್ಲ. ಬದಲಾಗಿ ಇನ್ನಷ್ಟು ಜೋರಾಗಿ ತಿವಿಯುತ್ತೆ. ತಕ್ಷಣವೇ ಸುತ್ತಮುತ್ತಲಿದ್ದವರೆಲ್ಲ ಓಡಿ ಬಂದು ಆ ಮಗುವನ್ನ ರಕ್ಷಿಸುತ್ತಾರೆ. ಅಷ್ಟರೊಳಗಾಗಲೇ ಬಾಲಕನಿಗೆ ಗಂಭೀರ ಗಾಯಗಳಾಗಿ ಹೋಗಿರುತ್ತವೆ.
ಬಾಲಕನನ್ನ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಸದ್ಯಕ್ಕೆ ಬಾಲಕ ಚೇತರಿಸಿಕೊಂಡಿದ್ದು, ಹಂದಿಯ ದಾಳಿ ಆಘಾತದಿಂದ ಇನ್ನೂ ಹೊರಗೆ ಬಂದಿಲ್ಲ. ಇಷ್ಟು ದಿನ ನಾಯಿಗಳ ದಾಳಿಯಿಂದ ಕಂಗೆಟ್ಟ ಗೊಂಡಿಯಾ ಜಿಲ್ಲೆಯವರು, ಈಗ ಹಂದಿಯ ದಾಳಿಯ ಭಯದಿಂದ ದಿನ ಕಳೆಯೊ ಹಾಗಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿ ಈ ವಿಡಿಯೋ ನೋಡಿದವರಲ್ಲ ಶಾಕ್ ಆಗ್ಹೋಗಿದ್ದಾರೆ.