ತಿರುಪತಿ: ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ವೈಕುಂಠ ಏಕಾದಶಿಗೆ ಈ ಬಾರಿ ಅತಿ ಕಡಿಮೆ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಹುಂಡಿ ಹಣದಲ್ಲೂ ಭಾರಿ ಇಳಿಕೆಯಾಗಿದೆ.
ದಿನಕ್ಕೆ 80,000 ದಿಂದ ಒಂದು ಲಕ್ಷ ಭಕ್ತರ ನಿರೀಕ್ಷೆಗೆ ಕೇವಲ 67 ಸಾವಿರ ಭಕ್ತರು ಆಗಮಿಸಿದ್ದಾರೆ. ಹುಂಡಿ ಹಣದಲ್ಲಿಯೂ ಭಾರಿ ಇಳಿಕೆ ಕಂಡು ಬಂದಿದೆ. ಕಳೆದ ವರ್ಷಕ್ಕಿಂತ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷ 69 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದರು. ಕಳೆದ ವೈಕುಂಠ ಏಕಾದಶಿಯಲ್ಲಿ 7.68 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದು, ಈ ಬಾರಿ 2.5 ಕೋಟಿ ರೂ. ಸಂಗ್ರಹವಾಗಿದೆ.
ದರ್ಶನದ ಟಿಕೆಟ್ ಸಿಗದಿರುವುದು, ನಿರ್ಬಂಧ, ಮುಂಗಡ ಬುಕಿಂಗ್ ರದ್ದುಗೊಳಿಸುವ ಆಯ್ಕೆ ಮೊದಲಾದ ಕಾರಣಗಳಿಂದ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ.