
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗಾಗಿ ವಿಶೇಷ ದರ್ಶನ ಟಿಕೆಟ್ ಗಳನ್ನು ಇಂದು ಬಿಡುಗಡೆ ಮಾಡಲಾಗುವುದು.
ಟಿಟಿಡಿ ಟಿಕೆಟ್ ವಿತರಣೆ ಬಗ್ಗೆ ಮಾಹಿತಿ ನೀಡಿದ್ದು, ಮೇ ತಿಂಗಳ ಶ್ರೀವಾರಿ ದರ್ಶನದ ಟಿಕೆಟ್ ಗಳನ್ನು ಫೆಬ್ರವರಿ 19ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ತೋಮಾಲಾ, ಸುಪ್ರಭಾತಂ, ಅಷ್ಟದಳ ಪಾದಪದ್ಮರಾಧನೆಯ ಆನ್ಲೈನ್ ಲಕ್ಕಿ ಡಿಪ್ ಸೇವೆಗಳಿಗೆ ಸೋಮವಾರ ಬೆಳಗ್ಗೆ 10 ಗಂಟೆಗೆ ನೋಂದಣಿ ಆರಂಭವಾಗುತ್ತದೆ.
ಮೇ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್ ಗಳ ಕೋಟಾ ಫೆಬ್ರವರಿ 24ರಂದು ಬಿಡುಗಡೆ ಮಾಡಲಾಗುತ್ತದೆ. 300 ರೂ. ವಿಶೇಷ ಪ್ರವೇಶ ದರ್ಶನ ಟಿಕೆಟ್ ಗಳಿಗೆ ಬೆಳಿಗ್ಗೆ 10 ಗಂಟೆಗೆ, ವಸತಿ ನಿಲಯದ ಕೊಠಡಿಗಳ ಕೋಟಾ ಮಧ್ಯಾಹ್ನ 3 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.