ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗುರುವಾರ 2022-23ನೇ ಹಣಕಾಸು ವರ್ಷದ ವಾರ್ಷಿಕ ಬಜೆಟ್ ಬಿಡುಗಡೆ ಮಾಡಿದ್ದು, 3,096.40 ಕೋಟಿ ರೂಪಾಯಿಗಳ ಆದಾಯದ ಮುನ್ಸೂಚನೆ ಕೊಟ್ಟಿದೆ.
ಬಜೆಟ್ ಸಭೆಯಲ್ಲಿ ಮುಂದಿನ 12 ತಿಂಗಳ ಹಣಕಾಸು ಯೋಜನೆಯನ್ನು ಪರಿಶೀಲಿಸಿದ ನಂತರ, ಟಿಟಿಡಿ ಮಂಡಳಿಯ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಕೆ ಎಸ್ ಜವಾಹರ ರೆಡ್ಡಿ, ಮಂಡಳಿಯು ವಾರ್ಷಿಕ ಬಜೆಟ್‌ಗೆ ಅನುಮೋದನೆ ನೀಡಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಥಟ್ಟಂತ ರೆಡಿಯಾಗುವ ರುಚಿಕರ ರಸಂ
‘ಹುಂಡಿ’ಯಿಂದ 1000 ಕೋಟಿ ರೂ.
ಒಟ್ಟು ನಿರೀಕ್ಷಿತ ಆದಾಯದಲ್ಲಿ, ಲಕ್ಷಾಂತರ ಭಕ್ತರು ಬೆಟ್ಟಗಳ ಮೇಲಿನ ದೇವಾಲಯದ ಸಂಕೀರ್ಣದಲ್ಲಿರುವ ಪವಿತ್ರ ‘ಹುಂಡಿ’ (ಕಾಣಿಕೆ ಪೆಟ್ಟಿಗೆ) ಯಲ್ಲಿ ಸಲ್ಲಿಸಿದ ನಗದು ಕಾಣಿಕೆಯಿಂದ ಸುಮಾರು 1,000 ಕೋಟಿ ರೂ. ಹಾಗೂ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿನ ಠೇವಣಿ ಮೇಲಿನ ಬಡ್ಡಿಯಿಂದ ಸುಮಾರು 668.5 ಕೋಟಿ ರೂಪಾಯಿ ಆದಾಯ ಬರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಟಿಕೆಟ್ ಮಾರಾಟ, ‘ಲಡ್ಡು ಪ್ರಸಾದ’ದಿಂದ 727 ಕೋಟಿ ರೂ.
ದೇವಸ್ಥಾನದಲ್ಲಿ ದಿನನಿತ್ಯದ ಮತ್ತು ವಾರದ ಆಚರಣೆಗಳು, ವಿಐಪಿಗಳ ವಿಶೇಷ ಪ್ರವೇಶ ಟಿಕೆಟ್‌ಗಳು ಮತ್ತು 300 ರೂ.ಗಳ ಆನ್‌ಲೈನ್ ಟಿಕೆಟ್‌ಗಳು ಸೇರಿದಂತೆ ವಿವಿಧ ರೀತಿಯ ಪೂಜಾ ಟಿಕೆಟ್‌ಗಳ ಮಾರಾಟದಿಂದ ಗಳಿಸಿದ ಆದಾಯವು ಸುಮಾರು 362 ಕೋಟಿ ರೂ. ಹಾಗೂ ಪ್ರಸಾದದಿಂದ ಸುಮಾರು 365 ಕೋಟಿ ರೂಪಾಯಿ ಆದಾಯ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಭಕ್ತರ ಕೇಶದಿಂದ 126 ಕೋಟಿ ರೂ.
ಭಕ್ತಾದಿಗಳಿಗೆ ಮಂಜೂರಾಗಿರುವ ಟಿಟಿಡಿ ವಸತಿ ಮತ್ತು ಮದುವೆ ಮಂಟಪಗಳಿಂದ ಬರುವ ಆದಾಯ ಸುಮಾರು 95 ಕೋಟಿ ಎಂದು ಅಂದಾಜಿಸಲಾಗಿದೆ ಮತ್ತು ಭಕ್ತರು ತಮ್ಮ ವ್ರತದ ನೆರವೇರಿಕೆಗಾಗಿ ಅರ್ಪಿಸುವ ಕೇಶಮುಂಡನದ ಕೂದಲಿನ ಹರಾಜಿನಿಂದ ಬರುವ ಆದಾಯವು 126 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಿಟಿಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾನವ ಸಂಪನ್ಮೂಲ ನಿರ್ವಹಣಾ ವೆಚ್ಚವು ಸುಮಾರು 1,360 ಕೋಟಿ ರೂ.ಗಳಷ್ಟಿದೆ ಎನ್ನಲಾಗಿದೆ.