ಅಮರಾವತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ದೇಗುಲ ಆಡಳಿತ ಮಂಡಳಿಗೆ ನೂತನ ಸಮಿತಿಯನ್ನು ಆಂಧ್ರಪ್ರದೇಶ ಸರ್ಕಾರ ರಚನೆ ಮಾಡಿ ಆದೇಶ ಹೊರಡಿಸಿದೆ.
ಟಿವಿ 5 ಸಮೂಹದ ಮುಖ್ಯಸ್ಥ ಬಿ. ರಾಜಗೋಪಾಲ ನಾಯ್ಡು ಅವರನ್ನು ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಸಮಿತಿಯಲ್ಲಿ ಕರ್ನಾಟಕದ ಮೂವರನ್ನು ಕೂಡ ನೇಮಕ ಮಾಡಲಾಗಿದೆ.
ಸುಪ್ರೀಂಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹೆಚ್.ಎಲ್. ದತ್ತು, ನರೇಶ್ ಕುಮಾರ್, ಆರ್.ಎನ್. ದರ್ಶನ್ ಅವರನ್ನು ಟಿಟಿಡಿಗೆ ನೇಮಕ ಮಾಡಲಾಗಿದೆ. ಕೇಂದ್ರ ಮಾಜಿ ಸಚಿವೆ ಪನಬಾಕ ಲಕ್ಷ್ಮಿ ಸೇರಿ 24 ಜನ ಸದಸ್ಯರು ಸಮಿತಿಯಲ್ಲಿದ್ದಾರೆ.