
ತಿರುಪತಿ: ಬೇಸಿಗೆ ರಜೆಯಲ್ಲಿ ಯಾತ್ರಿಕರ ನೂಕುನುಗ್ಗಲು ಉತ್ತುಂಗಕ್ಕೇರಿದ ಹಿನ್ನಲೆಯಲ್ಲಿ ತಿರುಮಲ ತಿರುಪತಿ ದೇವಾಲಯದಲ್ಲಿ ವಿಐಪಿ ದರ್ಶನ ರದ್ದುಪಡಿಸಲಾಗಿದೆ. ಜೂನ್ 30 ರವರೆಗೆ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ವಿಐಪಿ ಬ್ರೇಕ್ ದರ್ಶನವನ್ನು ಟಿಟಿಡಿ ರದ್ದುಗೊಳಿಸಿದೆ.
ಸರ್ವ ದರ್ಶನ ಯಾತ್ರಾರ್ಥಿಗಳ ದರ್ಶನ ಸಮಯವು ಈಗಾಗಲೇ ಸುಮಾರು 30-40 ಗಂಟೆಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಸಾಮಾನ್ಯ ಯಾತ್ರಿಕರ ಹಿತಾಸಕ್ತಿ ದೃಷ್ಟಿಯಿಂದ ಟಿಟಿಡಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅದರಂತೆ ವಿಐಪಿ ದರ್ಶನಕ್ಕೆ ಬ್ರೇಕ್ ಹಾಕಿದ್ದು, ಯಾವುದೇ ಶಿಫಾರಸು ಪತ್ರಗಳನ್ನು ಸ್ವೀಕರಿಸುವುದಿಲ್ಲ. ಭಕ್ತರು ಇದನ್ನು ಗಮನಿಸಿ ಟಿಟಿಡಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಬೇಸಿಗೆ ರಜೆ ವಿಶೇಷವಾಗಿ ಎಲೆಕ್ಷನ್ ಗಳು, ವಿದ್ಯಾರ್ಥಿಗಳ ಪರೀಕ್ಷೆ, ಫಲಿತಾಂಶ ಮುಗಿದು ಭಕ್ತರ ಜನಸಂದಣಿ ಮುಂದುವರಿದಿದೆ. ಸಾಮಾನ್ಯ ಭಕ್ತರ ಜನಸಂದಣಿಯಿಂದಾಗಿ ದರ್ಶನಕ್ಕೆ ಸುಮಾರು 30, 40 ಗಂಟೆಗಳವರೆಗೆ ಕ್ಯೂ ಲೈನ್‌ಗಳಲ್ಲಿ ನಿರೀಕ್ಷಿಸಬೇಕಾದ ಪರಿಸ್ಥಿತಿ ಇದೆ. ಸಾಮಾನ್ಯ ಭಕ್ತರಿಗೆ ತ್ವರಿತಗತ ಶ್ರೀವಾರಿ ದರ್ಶನವನ್ನು ಕಲ್ಪಿಸಲು, ಜೂನ್ 30 ರ ವರೆಗೆ ಶುಕ್ರ, ಶನಿ, ಆದಿವಾರಗಳಲ್ಲಿ ವಿಐಪಿ ದರ್ಶನವನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗಿದೆ.