
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯವಾಗಿರುವ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ(ಟಿಟಿಡಿ) ಮುಂದಿನ ಆರ್ಥಿಕ ವರ್ಷಕ್ಕೆ 5258 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದೆ.
2025 -26 ನೇ ಸಾಲಿಗೆ ಟಿಟಿಡಿಯಿಂದ 5258 ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್ ಗಾತ್ರ 79 ಕೋಟಿ ರೂ. ಅಧಿಕವಾಗಿದೆ. ಕಾಣಿಕೆ ಹುಂಡಿಯಿಂದ 1729 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಕಳೆದ ವರ್ಷ 1.6 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಇದರೊಂದಿಗೆ ಬ್ಯಾಂಕಿನಲ್ಲಿ ಇರಿಸಿರುವ 18 ಸಾವಿರ ಕೋಟಿ ರೂ.ನಷ್ಟು ಸ್ಥಿರ ಠೇವಣಿಗೆ 1.3 ಸಾವಿರ ಕೋಟಿ ರೂ. ಬಡ್ಡಿ ಸಿಗಲಿದೆ. ಪ್ರಸಾದದಿಂದ 600 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುವವರ ವೇತನ ಮತ್ತು ವೈದ್ಯಕೀಯ ಸೌಲಭ್ಯಗಳ ಹೆಚ್ಚಳ, ವಿವಿಐಪಿಯೇತರ ಅತಿಥಿಗೃಹ ನಿರ್ಮಾಣ ಮಾಡುವುದಾಗಿ ಹೇಳಲಾಗಿದೆ.