ಸುನಾಮಿ ಕಿಟ್ಟಿ ಅಭಿನಯದ ಒರಟ ಶ್ರೀ ನಿರ್ದೇಶನದ ಬಹು ನಿರೀಕ್ಷಿತ ‘ಕೋರ’ ಚಿತ್ತದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಈ ಟ್ರೈಲರ್ ನಲ್ಲಿ ತೋರಿಸಿರುವ ಆಕ್ಷನ್ ದೃಶ್ಯಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಈ ಚಿತ್ರದಲ್ಲಿ ಸುನಾಮಿ ಕಿಟ್ಟಿ, ಚರಿಷ್ಮಾ, ಪಿ ಮೂರ್ತಿ ಮತ್ತು ಎಮ್ ಕೆ ಮಠ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರತ್ನಮ್ಮ ಮೂವೀಸ್ ಬ್ಯಾನರ್ ನಲ್ಲಿ ಪಿ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಬಿ ಆರ್ ಹೇಮಂತ್ ಕುಮಾರ್ ಸಂಗೀತ ಸಂಯೋಜನೆ ನೀಡಿದ್ದು, ಕೆ ಗಿರೀಶ್ ಕುಮಾರ್ ಸಂಕಲನ, ಕೋರ ಚಿನ್ನಯ್ಯ ಸಾಹಸ ನಿರ್ದೇಶನ, ಲೋಕಿ ವೇಷಭೂಷಣ, ಜಿನೇಂದ್ರ ಕಲಾ ನಿರ್ದೇಶನ ಹಾಗೂ ಸೆಲ್ವಂ ಮಾಥಪ್ಪನ್ ಅವರ ಛಾಯಾಗ್ರಹಣವಿದೆ.