alex Certify ತೂಕ ಇಳಿಸಿಕೊಳ್ಳುವ ವೇಳೆ ಅಪ್ಪಿತಪ್ಪಿಯೂ ಮಾಡೀರಿ ಈ ತಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಿಕೊಳ್ಳುವ ವೇಳೆ ಅಪ್ಪಿತಪ್ಪಿಯೂ ಮಾಡೀರಿ ಈ ತಪ್ಪು

ಇಂದಿನ ಲೈಫ್ ಸ್ಟೈಲ್ ನಲ್ಲಿ ದಪ್ಪಗಾಗೋದು ಬಹಳ ಸುಲಭ. ಆದರೆ ತೂಕ ಇಳಿಸುವುದು ಅಷ್ಟು ಸುಲಭವಲ್ಲ. ಹಾಗಂತ ಅಷ್ಟು ಕಷ್ಟದ ಕೆಲಸವೂ ಅಲ್ಲ. ಹಾಗೆ ನೀವು ತೂಕ ಇಳಿಸಿಕೊಳ್ಳೋದಕ್ಕೆ ನಾನಾ ಕಸರತ್ತುಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ.

ಹೆಚ್ಚಿನ ಮಸಲ್ ಗಳನ್ನು ಹೊಂದಿರುವ ದೇಹ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡುತ್ತೆ. ಹೀಗಾಗಿ ಮಸಲ್ ಗಳನ್ನು ಬೆಳೆಸುವುದು ತೂಕ ಇಳಿಕೆಗೆ ಸಹಕಾರಿ.

ನೀವು ತೂಕ ಇಳಿಸಿಕೊಳ್ಳಲು ದಿನವೂ ವ್ಯಾಯಾಮ ಮಾಡುತ್ತೀರೆಂದಾದರೆ ನಿಮಗೆ ಬೇಕೆನಿಸಿದ್ದನ್ನು ತಿನ್ನಿ. ಆದರೆ ಅದು ವಾರಕ್ಕೆ ಒಮ್ಮೆ ಮಾತ್ರವಾಗಿರಲಿ. ಬೇಕಾಬಿಟ್ಟಿಯಾಗಿ ತಿನ್ನದಿರಿ.

ನಿಮ್ಮ ವರ್ಕೌಟ್ ಗಳನ್ನು ಪದೇ ಪದೇ ಬದಲಾಯಿಸದಿರಿ. ಕೆಲ ವ್ಯಾಯಾಮಗಳನ್ನು ಕೆಲ ವಾರಗಳ ಕಾಲ ಮಾಡಿದಾಗಲೇ ಫಲಿತಾಂಶ ಸಿಗುತ್ತದೆ.

ನೀವು ಜಿಮ್ ಗೆ ಹೋಗುತ್ತೀರೆಂದಾದರೆ ನಿಮ್ಮ ಕೈಲೆಷ್ಟಾಗುತ್ತೋ ಅಷ್ಟು ಗರಿಷ್ಟ ವ್ಯಾಯಾಮ ಮಾಡಿ. ಮೈಗಳ್ಳತನ ಮಾಡದಿರಿ.

ಅಸಮಂಜಸವಾದ ದಿನಚರಿ ನಿಮ್ಮದಾಗಿಲ್ಲದಿರಲಿ. ವ್ಯಾಯಾಮ, ಹೆಲ್ತಿ ಡಯಟ್ ಅನ್ನು ಆರಂಭಿಸಿದ ಮೇಲೆ ಅದನ್ನು ನಿಯಮಿತವಾಗಿ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...