
ಹದಿಹರೆಯದಲ್ಲಿ ಹಾರ್ಮೋನ್ ಸಮಸ್ಯೆ, ವಾತಾವರಣದ ಧೂಳು, ಕೊಳೆ ಮುಂತಾದವುಗಳಿಂದ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಹಾಗಾಗಿ ಈ ಮೊಡವೆ ಸಮಸ್ಯೆ ನಿವಾರಿಸಿ, ಮುಖದ ಚರ್ಮವನ್ನು ಸ್ವಚ್ಛಗೊಳಿಸಲು ಈ ಫೇಸ್ ವಾಶ್ ಬಳಸಿ.
ಸ್ವಚ್ಛಗೊಳಿಸಿದ 20 ಬೇವಿನ ಎಲೆಗಳಗೆ 20 ತುಳಸಿ ಎಲೆಗಳನ್ನು ಸೇರಿಸಿ ನೀರು ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಸೋಸಿ. ಬಳಿಕ ಸೋಪ್ ಬೇಸ್ ನ್ನು ಡಬಲ್ ಬಾಯ್ಲರ್ ನಲ್ಲಿ ಕರಗಿಸಿಕೊಳ್ಳಿ. ಹಾಗೇ ತುಳಸಿ ಮತ್ತು ಬೇವಿನ ರಸಕ್ಕೆ 1 ಚಮಚ ಅಲೋವೆರಾ ಜ್ಯೂಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿಡಿ.