ಮಧುಮೇಹಿಗಳು ಮತ್ತು ಮಧುಮೇಹಿಗಳಲ್ಲದವರು ತಿನ್ನುವ ಆಹಾರ ಅಥವಾ ಕುಡಿಯುವ ಚಹಾ ಕಾಫಿಗೆ ಸಕ್ಕರೆ ಅಥವಾ ಬೆಲ್ಲ ಬಳಸಿ ನೋಡಿ. ನಿಮ್ಮ ಆರೋಗ್ಯದಲ್ಲಿ ಅದೆಷ್ಟು ಬದಲಾವಣೆಗಳಾಗುತ್ತವೆ ಎಂಬುದನ್ನು ನೀವೇ ಗಮನಿಸಿ.
ಬೆಳಗೆದ್ದು ಕುಡಿಯುವ ಚಹಾಗೆ ಸಕ್ಕರೆ ಬದಲು ಬೆಲ್ಲ ಬಳಸಿ. ಆರಂಭದ ಕೆಲವು ದಿನಗಳ ತನಕ ಇದು ರುಚಿ ಇಲ್ಲ ಎನಿಸಿದರೂ ಕ್ರಮೇಣ ಇದು ನಿಮಗೆ ಇಷ್ಟವಾಗುತ್ತದೆ.
ಹಬ್ಬ ಹರಿದಿನಗಳಲ್ಲಿ ಸಕ್ಕರೆಯ ಲಾಡು, ಜಿಲೇಬಿ ತಯಾರಿಗೆ ಸಕ್ಕರೆ ಬಳಸುವ ಬದಲು ಬೆಲ್ಲ ಹಾಕಿ ನೋಡಿ. ಇದರಿಂದ ರುಚಿಯೂ ಹೆಚ್ಚುತ್ತದೆ. ನಿಮ್ಮ ಸಿಹಿತಿಂಡಿ ಹೊಸ ರುಚಿಯಾಗಿರುತ್ತದೆ.
ಬೆಲ್ಲದಲ್ಲಿರುವ ಪೋಷಕಾಂಶಗಳು, ಐರನ್, ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂಗಳು ದೇಹಕ್ಕೆ ಅತ್ಯಗತ್ಯವಾಗಿರುತ್ತದೆ. ಬೆಲ್ಲದ ಸೇವನೆಯಿಂದ ರಕ್ತಹೀನತೆಯಂಥ ಸಮಸ್ಯೆಯನ್ನೂ ಬಗೆಹರಿಸಬಹುದು. ನಿತ್ಯ ಊಟದ ಬಳಿಕ ಒಂದು ತುಂಡು ಬೆಲ್ಲ ಬಾಯಿಗೆ ಹಾಕಿಕೊಂಡರೆ ಸಾಕು ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಬೆಲ್ಲದ ಪಾನಕಕ್ಕೆ ಎರಡು ತುಳಸಿ ಎಲೆ ಹಾಕಿ ಕುಡಿದರೆ ಒಣ ಕೆಮ್ಮಿನ ಸಮಸ್ಯೆಯೂ ದೂರವಾಗುತ್ತದೆ.