ಮುಖವನ್ನು ಅಂದವಾಗಿಸಿಕೊಳ್ಳುವುದಕ್ಕಾಗಿ ದುಬಾರಿ ಕ್ರೀಂ, ಫೇಸ್ ವಾಶ್ ಗಳನ್ನು ಬಳಸುತ್ತೇವೆ. ಆದರೆ ಇದು ತಾತ್ಕಾಲಿಕ ಪರಿಣಾಮ ಬೀರುತ್ತದೆ. ನಾವು ಏನು ತಿನ್ನುತ್ತೇವೆ ಎಂಬುದು ಕೂಡ ನಮ್ಮ ಮುಖದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ.
ಅತೀಯಾದ ಫಾಸ್ಟ್ ಫುಡ್, ಜುಂಕ್ ಫುಡ್ ಗಳನ್ನು ಸೇವಿಸುವುದರ ಮೂಲಕ ನಾನಾ ರೀತಿಯ ಸಮಸ್ಯೆಗಳು ಬರುತ್ತದೆ. ಹಾಗೇ ಇದು ಹಾರ್ಮೋನಲ್ ಏರಿಳಿತಕ್ಕೆ ಕಾರಣವಾಗುತ್ತದೆ.
ಆರೋಗ್ಯಕರವಾದ ತ್ವಚೆ ನಿಮ್ಮದಾಗಬೇಕೆಂದರೆ ಈ ವಿಧಾನವನ್ನು ಒಮ್ಮೆ ಪ್ರಯತ್ನಿಸಿ ನೋಡಿ ಒಂದು ಬಾಳೆಹಣ್ಣು, ಅರ್ಧ ಕಪ್ ಪೈನಾಪಲ್ ಹೋಳುಗಳನ್ನು ಸಣ್ಣಗೆ ಕತ್ತರಿಸಿಕೊಂಡು ಒಂದು ತಟ್ಟೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ 1 ಚಮಚ ಅಗಸೆಬೀಜ, ಸಣ್ಣ ತುಂಡು ಕತ್ತರಿಸಿದ ಶುಂಠಿ, 1 ಚಮಚ ತೆಂಗಿನ ಎಣ್ಣೆ, ½ ಟಿ ಸ್ಪೂನ್ ಚಕ್ಕೆ ಪುಡಿ, 1 ಟಿ ಸ್ಪೂನ್ ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ 1 ಲೋಟ ತೆಂಗಿನ ಹಾಲು ಹಾಕಿ ಬ್ಲೆಂಡ್ ಮಾಡಿ. ಸಿಹಿ ಇಷ್ಟಪಡುವವರು ಸ್ವಲ್ಪ ಜೇನುತುಪ್ಪವನ್ನು ಸೇರಿಸಿಕೊಂಡು ಕುಡಿಯಬಹುದು. ಇದು ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸುತ್ತದೆ. ಹಾಗೇ ಇದರಿಂದ ನಿಮ್ಮ ಮುಖದ ಅಂದವು ಹೆಚ್ಚುತ್ತದೆ. ಮೊಡವೆ ಇನ್ನಿತರ ಚರ್ಮದ ಸಮಸ್ಯೆಗಳಿಂದ ಪಾರು ಮಾಡುತ್ತದೆ.