![](https://kannadadunia.com/wp-content/uploads/2021/01/shutterstock_366865592.jpg)
ಚಳಿಗಾಲದಲ್ಲಿ ನಿಮ್ಮ ತ್ವಚೆಯ ಸೂಕ್ಷ್ಮತೆಯನ್ನು ಕಾಪಾಡುವ ಫೇಸ್ ಪ್ಯಾಕ್ ಒಂದು ಇಲ್ಲಿದ್ದು ಇದನ್ನು ಹಾಕಿಕೊಳ್ಳುವುದರಿಂದ ಸುಂದರ ಹಾಗೂ ಆಕರ್ಷಕ ಮುಖ ನಿಮ್ಮದಾಗುತ್ತದೆ. ಇದನ್ನು ಮನೆಯಲ್ಲೇ ಮಾಡುವ ವಿಧಾನ ಹೇಗೆಂದು ತಿಳಿಯೋಣ ಬನ್ನಿ.
ಒಂದು ಚಮಚ ಅಲೋವೇರಾ ಜೆಲ್ ಗೆ ಎರಡು ಚಮಚ ಕಡಲೆ ಹಿಟ್ಟು, ಆಪಲ್ ಸೈಡರ್ ವಿನೆಗರ್ ಮತ್ತು ಒಂದು ಚಮಚ ನಿಂಬೆರಸ ಸೇರಿಸಿ. ಎಲ್ಲವನ್ನೂ ಜೆನ್ನಾಗಿ ಬೆರೆಸಿ ಗಂಟಾಗದಂತೆ ನೋಡಿಕೊಳ್ಳಿ.
ಮೊದಲು ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ರೋಸ್ ವಾಟರ್ ನಿಂದ ತೊಳೆಯುವುದು ಮತ್ತೂ ಒಳ್ಳೆಯದು. ಬಳಿಕ ಈ ಪೇಸ್ಟ್ ಹಚ್ಚಿ, ಕನಿಷ್ಠ 30 ನಿಮಿಷಗಳ ಬಳಿಕ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ನಿಮ್ಮ ತ್ವಚೆ ಹೊಳೆಯುವುದು ಮಾತ್ರವಲ್ಲ, ಡೆಡ್ ಸ್ಕಿನ್ ದೂರವಾಗುತ್ತದೆ.
ಕಡಲೆ ಹಿಟ್ಟು ಸ್ಕ್ರಬ್ ನ ಪರಿಣಾಮ ಕೊಟ್ಟರೆ ಅಲೋವೇರಾ ನಿಮಗೆ ವಯಸ್ಸಾದ ಲಕ್ಷಣಗಳು ಅಂದರೆ ಮುಖದ ಸುಕ್ಕು ಹಾಗೂ ಗೆರೆಗಳನ್ನು ದೂರಮಾಡುತ್ತದೆ. ನಿಂಬೆ ಮತ್ತು ವಿನೆಗರ್ ರಕ್ತ ಸಂಚಾರವನ್ನು ಚುರುಕುಗೊಳಿಸಿ ನಿಮ್ಮ ತ್ವಚೆಗೆ ಮತ್ತಷ್ಟು ಆಕರ್ಷಣೆ ನೀಡುತ್ತದೆ.