20 –ಬೆಂಡೆಕಾಯಿ, 1 ಟೀ ಸ್ಪೂನ್-ಖಾರದ ಪುಡಿ, 1 ಟೀ ಸ್ಪೂನ್-ಕೊತ್ತಂಬರಿ ಪುಡಿ, ¼ ಟೀ ಸ್ಪೂನ್-ಇಂಗು, ¼ ಕಪ್-ರವಾ, ½ ಟೀ ಸ್ಪೂನ್-ಉಪ್ಪು, ½ ಟೀ ಸ್ಪೂನ್-ಅರಿಶಿನ ಪುಡಿ, 6 ಟೇಬಲ್ ಸ್ಪೂನ್-ಎಣ್ಣೆ, ½ ಟೀ ಸ್ಪೂನ್-ಜೀರಿಗೆ ಪುಡಿ.
ಮಾಡುವ ವಿಧಾನ:
ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ನೀರಿನಂಶವನ್ನೆಲ್ಲಾ ಒರೆಸಿಕೊಳ್ಳಿ. ನಂತರ ಇದನ್ನು ಉದ್ದಕ್ಕೆ 4 ಭಾಗವಾಗಿ ಸೀಳಿಕೊಳ್ಳಿ. ನಂತರ ಇದನ್ನೆಲ್ಲಾ ಒಂದು ಬೌಲ್ ಗೆ ಹಾಕಿ ಅದಕ್ಕೆ ಖಾರದಪುಡಿ, ಕೊತ್ತಂಬರಿ ಪುಡಿ, ಇಂಗು, ಉಪ್ಪು, ಅರಿಸಿನ ಪುಡಿ, ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಹಾಗೇ ಬಿಡಿ.
ಬೆಂಡೆಕಾಯಿ ನೀರು ಬಿಡುತ್ತದೆ. ನಂತರ ಒಂದು ತಟ್ಟೆಯಲ್ಲಿ ರವೆ ಇಟ್ಟುಕೊಳ್ಳಿ. ಒಂದು ಅಗಲವಾದ ಪಾತ್ರೆಗೆ ಎಣ್ಣೆ ಹಾಕಿ ಮಸಾಲೆ ಹಾಕಿಟ್ಟುಕೊಂಡ ಬೆಂಡೆಕಾಯಿಯನ್ನು ರವೆಯನ್ನು ಹೊರಳಾಡಿಸಿ ಎಣ್ಣೆ ಹಾಕಿ ತವಾ ಫ್ರೈ ಮಾಡಿಕೊಂಡರೆ ರುಚಿಕರವಾದ ಬೆಂಡೆಕಾಯಿ ಫ್ರೈ ಸವಿಯಲು ಸಿದ್ಧ.