ಪೆಡಿಕ್ಯೂರ್ ಮಾಡಲು ಇನ್ನು ಮುಂದೆ ಬ್ಯೂಟಿ ಪಾರ್ಲರ್ ಕದ ತಟ್ಟಬೇಕಿಲ್ಲ. ಮನೆಯಲ್ಲೇ ಇದನ್ನು ಮಾಡುವ ಸರಳ ವಿಧಾನವನ್ನು ಇಲ್ಲಿ ಹೇಳಿಕೊಡುತ್ತೇವೆ ಕೇಳಿ.
ತೆಂಗಿನೆಣ್ಣೆ ಮತ್ತು ಉಪ್ಪು ಎಲ್ಲರ ಮನೆಯಲ್ಲಿರುವ ಸಾಮಾನ್ಯ ವಸ್ತುಗಳು. ಇವೆರಡನ್ನು ಬಳಸಿ ಅತ್ಯುತ್ತಮ ರೀತಿಯಲ್ಲಿ ಪೆಡಿಕ್ಯೂರ್ ಮಾಡಿಕೊಳ್ಳಬಹುದು. ತೆಂಗಿನೆಣ್ಣೆ ತ್ವಚೆಯನ್ನು ಮೃದುಗೊಳಿಸಿದರೆ ಉಪ್ಪು ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕಲ್ಲುಪ್ಪು ಹಾಕಿ.
ಈ ಮಿಶ್ರಣವನ್ನು ಬೆಚ್ಚಗಿರುವಾಗಲೇ ಕಾಲಿಗೆ ಹಚ್ಚಿ ಸ್ಕ್ರಬ್ ಮಾಡಿ. ಇಪ್ಪತ್ತು ನಿಮಿಷ ಮಸಾಜ್ ಮಾಡಿದರೆ ಸಾಕು ನಿಮ್ಮ ಪಾದಗಳ ನೋವು ಕೂಡಾ ಕಡಿಮೆಯಾಗುತ್ತದೆ. ಲಿಂಬೆ ರಸಕ್ಕೆ ಸಕ್ಕರೆ ಬೆರೆಸಿಯೂ ಇದೇ ಪರಿಣಾಮವನ್ನು ಪಡೆಯಬಹುದು. ಕಾಲು ಕಪ್ ತೆಂಗಿನೆಣ್ಣೆಗೆ ಒಂದು ಕಪ್ ಸಕ್ಕರೆ, ಅರ್ಧ ನಿಂಬೆ ರಸ ಹಿಂಡಿ.
ಇದನ್ನು ಬೌಲ್ ನಲ್ಲಿ ಕಲೆಸಿ ನಿಮ್ಮ ಕಾಲುಗಳಿಗೆ ಹಚ್ಚಿಕೊಳ್ಳಿ. 15 ನಿಮಿಷ ಮಸಾಜ್ ಮಾಡಿ ಇದರಿಂದಲೂ ನಿರ್ಜೀವ ಜೀವಕೋಶಗಳು ಸತ್ತು ನಿಮ್ಮ ಕಾಲು ಹೊಳೆಯುತ್ತವೆ. ಸಕ್ಕರೆಗೆ ಜೇನುತುಪ್ಪ ಬೆರೆಸಿಯೂ ನೀವಿದನ್ನು ಪ್ರಯತ್ನಿಸಬಹುದು.