ಬೇಸಿಗೆಗೆ ಮಸಾಲೆಯುಕ್ತ ಖಾದ್ಯಗಳಿಗಿಂತ ಮೊಸರಿನಿಂದ ಮಾಡಿದ ಆಹಾರಗಳೇ ಹೆಚ್ಚು ಹಿತವೆನಿಸುತ್ತದೆ. ಇಲ್ಲಿ ಸುಲಭವಾದ ಒಂದು ಮೊಸರನ್ನ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಮೊಸರು – 1ಕಪ್, ಹಾಲು – 2 ಟೇಬಲ್ ಸ್ಪೂನ್, ಅನ್ನ – 1 ಕಪ್, ಈರುಳ್ಳಿ – 1 ದೊಡ್ಡದು, ಹಸಿ ತೆಂಗಿನಕಾಯಿ ತುರಿ – 2 ಟೇಬಲ್ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು.
ಒಗ್ಗರಣೆಗೆ: 1 – ಒಣಮೆಣಸು, ಎಣ್ಣೆ – 1 ಟೀ ಸ್ಪೂನ್, ಸಾಸಿವೆ – 1/4 ಟೀ ಸ್ಪೂನ್, ಇಂಗು – ಚಿಡಿಕೆ.
ಮಾಡುವ ವಿಧಾನ:
ಮೊದಲಿಗೆ ಅನ್ನಕ್ಕೆ ಹಾಲು, ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಂಡು ಹಾಕಿ. ಇದಕ್ಕೆ ಕಾಯಿತುರಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ಗ್ಯಾಸ್ ಮೇಲೆ ಒಗ್ಗರಣೆ ಸೌಟು ಇಟ್ಟು ಅದಕ್ಕೆ ಎಣ್ಣೆ ಹಾಕಿ, ಸಾಸಿವೆ. ಇಂಗು, ಒಣಮೆಣಸು ಹಾಕಿ ಒಗ್ಗರಣೆ ತಯಾರಿಸಿ ಮೊಸರನ್ನಕ್ಕೆ ಕೊಟ್ಟು ಸವಿಯಿರಿ.