ಕುಂಬಳಕಾಯಿಯಿಂದ ಕೂಡ ಸೂಪ್ ಮಾಡಬಹುದು ಅನ್ನೋದು ನಿಮಗೆ ಗೊತ್ತಾ? ನೀವು ಅದರ ಟೇಸ್ಟ್ ಮಾಡಿಲ್ಲ ಅಂದ್ರೆ ಇಂದೇ ಕುಂಬಳಕಾಯಿ ಸೂಪ್ ಮಾಡಿ.
ಕುಂಬಳಕಾಯಿ ಸೂಪ್ ಮಾಡಲು ಬೇಕಾಗುವ ಪದಾರ್ಥ :
ಮೂರು ಕಪ್ ಕತ್ತರಿಸಿದ ಕುಂಬಳಕಾಯಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಎರಡು ಆಲೂಗಡ್ಡೆ, ಒಂದು ಚಮಚ ಬೆಣ್ಣೆ, ಸಣ್ಣ ಚಮಚದಲ್ಲಿ ಒಂದು ಚಮಚ ಕರಿಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ.
ಅದಕ್ಕೆ ಕತ್ತರಿಸಿ ಆಲೂಗಡ್ಡೆ ಹಾಗೂ ಕುಂಬಳಕಾಯಿ ಹೋಳುಗಳನ್ನು ಹಾಕಿ.
ಒಂದು ಲೋಟ ನೀರು ಹಾಗೂ ಉಪ್ಪನ್ನು ಪ್ಯಾನ್ ಗೆ ಹಾಕಿ ಹೋಳುಗಳನ್ನು ಚೆನ್ನಾಗಿ ಬೇಯಿಸಿ.
ಹೋಳುಗಳು ಬೆಂದ ನಂತರ ಅದನ್ನು ತಣ್ಣಗಾಗಲು ಬಿಡಿ.
ಹೋಳುಗಳು ತಣ್ಣಗಾದ ನಂತರ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣವನ್ನು ಮತ್ತೆ ಬಿಸಿ ಮಾಡಿ. ಬಿಸಿ ಮಾಡುವಾಗ ಕಾಳುಮೆಣಸಿನ ಪುಡಿ ಹಾಕಿ.
ನಂತರ ಗಾರ್ಲಿಕ್ ಬ್ರೆಡ್ ಜೊತೆ ಸೂಪ್ ಸರ್ವ್ ಮಾಡಿ.