ಮಾವಿನಕಾಯಿ ಎಂದೊಡನೆ ಬಾಯಿ ಚಪ್ಪರಿಸುತ್ತದೆ. ಹೀಗಾಗಿ ಮಾವಿನಕಾಯಿಯ ಸೀಸನ್ ಮುಗಿಯುವ ಮುನ್ನ ಅದರಿಂದ ಬಗೆಬಗೆಯ ಖಾದ್ಯಗಳನ್ನು ಮಾಡಿ ಸವಿಯಿರಿ.
ಹಾಗೇ ಮಾವಿನಕಾಯಿ ಜ್ಯೂಸ್ ಮಾಡುವುದನ್ನು ಮರೆಯಬೇಡಿ.
ಬೇಕಾಗುವ ಸಾಮಾಗ್ರಿಗಳು
ಮಾವಿನಕಾಯಿ 4
ಸಕ್ಕರೆ 1 1/2 ಕಪ್
ಜೀರಿಗೆ 1 ಚಮಚ
ಪೆಪ್ಪರ್ ಪುಡಿ 1 ಚಮಚ
ಬ್ಲಾಕ್ ಸಾಲ್ಟ್ 1/2 ಚಮಚ
ನಿಂಬೆರಸ 2 ಚಮಚ
ಪುದೀನಾ 2 ಎಸಳು
ಕೆಂಪು ಮೆಣಸಿನ ಪುಡಿ 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮಾವಿನಕಾಯಿಗಳ ಸಿಪ್ಪೆ ತೆಗೆದು ಅದರ ತಿರುಳನ್ನು ಸಣ್ಣಗೆ ಕತ್ತರಿಸಿ ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು. ಸಕ್ಕರೆಗೆ ಒಂದು ದೊಡ್ಡ ಲೋಟ ನೀರು ಹಾಕಿ ಕುದಿಯಲು ಇಡಬೇಕು.
ಬೆಂದ ಮಾವಿನಕಾಯಿಗೆ ಜೀರಿಗೆ ಪುಡಿ, ಬ್ಲಾಕ್ ಸಾಲ್ಟ್, ಕೆಂಪು ಮೆಣಸಿನ ಪುಡಿ, ಪುದೀನಾ, ನಿಂಬೆರಸ ಮತ್ತು ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು.
ನಂತರ ಈ ಮಿಶ್ರಣವನ್ನು ಕುದಿಯುತ್ತಿರುವ ಸಕ್ಕರೆ ಪಾಕಕ್ಕೆ ಹಾಕಿ ಸಾಸ್ ಹದಕ್ಕೆ ಕಲಸಿ.
ಮಿಶ್ರಣ ಆರಿದ ನಂತರ ಬಾಟಲಿಯಲ್ಲಿ ಸಂಗ್ರಹಿಸಿಟ್ಟು ಫ್ರಿಜ್ಜಿನಲ್ಲಿಟ್ಟರೆ 2 ತಿಂಗಳವರೆಗೆ ಬಳಸಬಹುದು. ಕಾಲು ಲೋಟದಷ್ಟು ಈ ಜ್ಯೂಸ್ ಗೆ ಅಗತ್ಯವಿರುವಷ್ಟು ನೀರು ಬೆರೆಸಿ ಕುಡಿಯಬೇಕು.