
ವಾಷಿಂಗ್ಟನ್: ಅಮೆರಿಕದ ಪ್ರಧಾನ ಕಾನೂನು ಜಾರಿ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ಮುಂದಿನ ನಿರ್ದೇಶಕರಾಗಿ ಭಾರತೀಯ ಮೂಲದ ನಿಷ್ಠಾವಂತ ಕಾಶ್ ಪಟೇಲ್ ಅವರನ್ನು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಮನಿರ್ದೇಶನ ಮಾಡಿದ್ದಾರೆ.
“ಕಶ್ಯಪ್ ‘ಕಾಶ್’ ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನ ಮುಂದಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ” ಎಂದು ಟ್ರಂಪ್ ತಿಳಿಸಿದ್ದಾರೆ.
ಕಾಶ್ ಒಬ್ಬ ಅದ್ಭುತ ವಕೀಲ, ತನಿಖಾಧಿಕಾರಿ ಮತ್ತು ‘ಅಮೆರಿಕ ಫಸ್ಟ್’ ಹೋರಾಟಗಾರ, ಅವರು ಭ್ರಷ್ಟಾಚಾರ ತಡೆಯಲು, ನ್ಯಾಯ ಮತ್ತು ಅಮೆರಿಕನ್ ಜನರನ್ನು ರಕ್ಷಿಸಲು ತಮ್ಮ ವೃತ್ತಿಜೀವನ ಕಳೆದಿದ್ದಾರೆ ಎಂದು ಹೇಳಿದ್ದಾರೆ.