’ಕೈಗೆ ಸಿಕ್ಕಷ್ಟು ಬಾಚಿಕೊಳ್ಳಿ’ ಎಂಬಂಥ ಪರಿಸ್ಥಿತಿ ಬರಬೇಕು ಎನ್ನುವುದು ಬಹಳ ಮಂದಿಯ ಕನಸು. ಇಂಥದ್ದೇ ಕನಸು ನಿಜವಾದ ಘಟನೆ ಅಮೆರಿಕದ ಮೋಟರ್‌ವೇ ಒಂದರಲ್ಲಿ ಜರುಗಿದೆ.
ಶಸ್ತ್ರಸಜ್ಜಿತ ಟ್ರಕ್ ಒಂದರಲ್ಲಿದ್ದ ನಗದಿನ ಮೂಟೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆ ಪ್ರಮಾಣದಲ್ಲಿ ಬಿದ್ದ ಹಣದ ನೋಟುಗಳನ್ನು ಕೈಗೆ ಸಿಕ್ಕಷ್ಟು ಬಾಚಿಕೊಳ್ಳಲು ಜನರು ರಸ್ತೆಗೆ ಮುಗಿಬಿದ್ದಿದ್ದಾರೆ. ತಮ್ಮ ಕಾರುಗಳನ್ನು ಅಲ್ಲೇ ನಿಲ್ಲಿಸಿದ ಚಾಲಕರು ರಸ್ತೆಯ ಮಧ್ಯೆ ನೆರೆದು ಕೈಗೆ ಸಿಕ್ಕಷ್ಟು ಬಾಚಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಳೆ ಡೀಸೆಲ್ ವಾಹನಗಳು ರಸ್ತೆಗಿಳಿಯಲು ಗ್ರೀನ್ ಸಿಗ್ನಲ್, ಆದರೆ ಇದಕ್ಕಿದೆ ಒಂದು ಕಂಡೀಷನ್
ಸ್ಥಳೀಯ ಬ್ಯಾಂಕ್ ಒಂದರಿಂದ ಫೆಡರಲ್ ರಿಸರ್ವ್‌ನತ್ತ ತೆರಳುತ್ತಿದ್ದ ಈ ಟ್ರಕ್‌ನ ಬಾಗಿಲು ಅಕಸ್ಮಾತ್ ಆಗಿ ತೆರೆದುಕೊಂಡ ಪರಿಣಾಮ ಹೀಗೆ ನಗದೆಲ್ಲಾ ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.,
ಕ್ಯಾಲಿಫೋರ್ನಿಯಾ ಹೆದ್ದಾರಿ ಗಸ್ತು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಎಫ್‌ಬಿಐ ಸಹ ಭಾಗಿಯಾಗಿದೆ. ಪ್ರಕರಣ ಸಂಬಂಧ ಶುಕ್ರವಾರ ಇಬ್ಬರನ್ನು ಬಂಧಿಸಲಾಗಿದೆ.
https://www.youtube.com/watch?v=Gkc-ILYeb3U