ಸಂಚಾರೀ ಪೊಲೀಸ್ ಪೇದೆಯೊಬ್ಬರ ಮೇಲೆ ಕೈ ಮಾಡಿದ ಲಾರಿ ಚಾಲಕನೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಮುಂಬಯಿಯಿಂದ ಬರುತ್ತಿದ್ದ ತನ್ನ ಲಾರಿಯನ್ನು ನಗರ ಪ್ರವೇಶಿಸದಂತೆ ತಡೆ ಹಿಡಿದ ಪೇದೆ ಚಂದ್ರಶೇಖರ್ ಮೇಲೆ ಚಾಲಕ ಮುಷ್ತಾಕ್ ಅಹಮದ್ ಹೀಗೆ ಕೈ ಮಾಡಿದ್ದಾನೆ.
ಮುಂಬಯಿಯಿಂದ ತಂದಿದ್ದ ಲೋಡ್‌ಅನ್ನು ಚೆನ್ನೈನಲ್ಲಿ ಇಳಿಸಲು ಆಗಮಿಸುತ್ತಿದ್ದ ಅಹಮದ್‌ನನ್ನ ಮದ್ಯಾಹ್ನ 12:55ರ ವೇಳೆಗೆ ಇಲ್ಲಿನ ಪೊರೂರಿನಲ್ಲಿ ನಿಲ್ಲಿಸಿದ ಪೇದೆ ಹಗಲು ವೇಳೆಯಲ್ಲಿ ಭಾರೀ ವಾಹನಗಳಿಗೆ ಚೆನ್ನೈ ನಗರದ ಒಳಗೆ ಪ್ರವೇಶವಿಲ್ಲದ ಕಾರಣ ಹಿಂದೆ ಹೋಗಲು ತಿಳಿಸಿದ್ದಾರೆ.
ತನ್ನ ಲಾರಿಯನ್ನು ರಸ್ತೆಯಲ್ಲೇ ನಿಲ್ಲಿಸಿದ್ದ ಅಹಮದ್ ಮಿಕ್ಕ ವಾಹನಗಳ ಸಂಚಾರಕ್ಕೆ ಅಡಚಣೆಯುಂಟು ಮಾಡಿದ್ದಲ್ಲದೇ, ಇದನ್ನು ಪ್ರಶ್ನಿಸಿದ ಸಂಚಾರೀ ಪೊಲೀಸ್ ಪೇದೆ ಜೊತೆಗೆ ಜಗಳಕ್ಕಿಳಿದ ಅಹಮದ್ ಆತನಿಗೆ ಚೂರಿ ತೋರಿ ಬೆದರಿಕೆಯೊಡ್ಡಿದ್ದಾನೆ. ಇದಾದ ಬೆನ್ನಿಗೇ 57 ವರ್ಷದ ಚಾಲಕ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ.
ಲಾರಿ ಚಾಲಕನ ಈ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದಾಗ ಸ್ಥಳದಲ್ಲಿದ್ದ ಇನ್ನಿತರ ಸಿಬ್ಬಂದಿ ಅಹಮದ್‌ನನ್ನು ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
BREAKING NEWS: ತಡರಾತ್ರಿ ಮೈಸೂರು ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣದ ಮತ್ತೊಬ್ಬ ಆರೋಪಿ ಅರೆಸ್ಟ್
ಚಂದ್ರಶೇಖರ್ ನೀಡಿದ ದೂರಿನ ಅನ್ವಯ ಅಹಮದ್ ವಿರುದ್ಧ ಐಪಿಸಿಯ 294 (ಸಾರ್ವಜನಿಕ ಜಾಗದಲ್ಲಿ ಅಸಭ್ಯ ಭಾಷೆ ಬಳಕೆ), 332 ( ನಾಗರಿಕ ಸೇವಕರ ಮೇಲೆ ಕೈ ಮಾಡಿ ಅವರು ತಮ್ಮ ಕರ್ತವ್ಯ ನಿರ್ವಹಿಸದಂತೆ ತಡೆಯುವುದು) ಹಾಗೂ 506 (2) (ಕ್ರಿಮಿನಲ್ ವರ್ತನೆ) ವಿಧಿಗಳ ಅಡಿ ಪ್ರಕರಣ ದಾಖಲಿಸಲಾಗಿದೆ.