ಟಕ್ಸ್ ಟ್ಲಾ ಗುಟೈರೆಜ್(ಮೆಕ್ಸಿಕೊ): ಮಧ್ಯ ಅಮೆರಿಕದ ವಲಸಿಗರು ಪ್ರಯಾಣಿಸುತ್ತಿದ್ದ ಸರಕು ಸಾಗಣೆ ಟ್ರಕ್ ದಕ್ಷಿಣ ಮೆಕ್ಸಿಕೊದ ಹೆದ್ದಾರಿಯೊಂದರಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 49 ಜನರು ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ಅಂದಾಜಿನ ಪ್ರಕಾರ 49 ಮಂದಿ ಸಾವನ್ನಪ್ಪಿದ್ದು, 58 ಮಂದಿ ಗಾಯಗೊಂಡಿದ್ದಾರೆ ಎಂದು ಚಿಯಾಪಾಸ್ ರಾಜ್ಯ ನಾಗರಿಕ ರಕ್ಷಣಾ ಕಚೇರಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಮೊರೆನೊ ಹೇಳಿದ್ದಾರೆ. ಸುಮಾರು 40 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಚಿಯಾಪಾಸ್ ರಾಜ್ಯದ ರಾಜಧಾನಿ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಬಲಿಪಶುಗಳು ಮಧ್ಯ ಅಮೆರಿಕದಿಂದ ವಲಸೆ ಬಂದವರು. ಅವರ ರಾಷ್ಟ್ರೀಯತೆಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ. ಬದುಕುಳಿದವರಲ್ಲಿ ಕೆಲವರು ನೆರೆಯ ದೇಶವಾದ ಗ್ವಾಟೆಮಾಲಾದಿಂದ ಬಂದವರು ಎಂದು ಮೊರೆನೊ ತಿಳಿಸಿದ್ದಾರೆ.
ಕನಿಷ್ಠ 107 ಜನ ವಾಹನದಲ್ಲಿದ್ದರು. ಮೆಕ್ಸಿಕೋದಲ್ಲಿನ ಸರಕು ಸಾಗಣೆ ಟ್ರಕ್‌ಗಳು ದಕ್ಷಿಣ ಮೆಕ್ಸಿಕೋದಲ್ಲಿ ವಲಸೆ-ಕಳ್ಳಸಾಗಣೆ ಕಾರ್ಯಾಚರಣೆಗಳಲ್ಲಿ ಹಲವಾರು ಜನರನ್ನು ಸಾಗಿಸುತ್ತಾರೆ. ಘಟನಾ ಸ್ಥಳಕ್ಕೆ ಮೊದಲು ಆಗಮಿಸಿದ ಮತ್ತು ಹೆಸರನ್ನು ಉಲ್ಲೇಖಿಸಲು ಅಧಿಕೃತವಲ್ಲದ ರಕ್ಷಣಾ ಕಾರ್ಯಕರ್ತರು, ಟ್ರಕ್ ಅಪಘಾತಕ್ಕೀಡಾದಾಗ ಇನ್ನೂ ಹೆಚ್ಚಿನ ವಲಸಿಗರು ಟ್ರಕ್‌ನಲ್ಲಿದ್ದರು. ಬಂಧನಕ್ಕೊಳಗಾಗುವ ಭಯದಿಂದ ಓಡಿಹೋದರು ಎಂದು ಹೇಳಿದ್ದಾರೆ.
ಹಾಳಾಗುವ ಸರಕುಗಳನ್ನು ಸಾಗಿಸಲು ಬಳಸುವ ಟ್ರಕ್ ಡಿಕ್ಕಿಯ ರಭಸಕ್ಕೆ ನಜ್ಜುಗುಜ್ಜಾಗಿದೆ. ಚಾಲಕ ಬದುಕುಳಿದಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ.