ಹೊರಾಂಗಣ ಚಟುವಟಿಕೆಯ ರೂಪದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಪಾಶ್ಚಾತ್ಯ ಜಗತ್ತಿನಲ್ಲೊಂದು ಬಹಿರಂಗ ಶೋಕಿಯಾಗಿದೆ.
ಕಾಡು ಪ್ರಾಣಿಗಳನ್ನು ಬೇಟೆಯಾಡಿ, ಅವುಗಳ ಮೃತ ದೇಹದೊಂದಿಗೆ ಹೆಮ್ಮೆಯಿಂದ ಚಿತ್ರಗಳನ್ನೆ ಸೆರೆ ಹಿಡಿದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ನ್ಯೂಜಿಲೆಂಡ್‌ನ ರಗ್ಲನ್‌ನ ಜೆಸ್ಸಿಕಾ ಮರ್ಫಿ, ತಮ್ಮ ಮಗಳನ್ನೂ ಸಹ ಬೇಟೆಯಾಡಲು ತಮ್ಮೊಂದಿಗೆ ಕರೆದೊಯ್ಯುತ್ತಾರೆ.
ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ವಿವರ ಕೋರಿದ ಕೇಂದ್ರ
ತನ್ನ ಈ ’ಹವ್ಯಾಸ’ದಿಂದ ಜೆಸ್ಸಿಕಾ ಬಹಳಷ್ಟು ಮಂದಿಗೆ ರೋಲ್ ಮಾಡೆಲ್ ಆಗಿದ್ದಾರೆ. ಇದೇ ವೇಳೆ ಅನ್ಯ ಜೀವಿಗಳನ್ನು ಮನರಂಜನೆಗಾಗಿ ಬಲಿ ಪಡೆಯುವ ಆಕೆಯ ಪ್ರವೃತ್ತಿಗೆ ಬಹಳಷ್ಟು ಮಂದಿಗೆ ಶಪಿಸುವವರೂ ಇದ್ದಾರೆ.
ತನ್ನ ಮಲತಂದೆ ಬ್ರೆಂಡನ್ ಹಾಗೂ ತಾತ ರೇ ಕ್ರೇಕ್ ಜೊತೆಗೆ ಬೇಟೆಯಾಡಲು ತೆರಳುತ್ತಿದ್ದ ಜೆಸ್ಸಿಕಾ, ತಮಗೂ ಈ ಚಟ ಅಂಟಿಸಿಕೊಂಡಿದ್ದಾರೆ. ಎರಡು ದಶಕಗಳ ಬಳಿಕ ತಮ್ಮ ಈ ಹವ್ಯಾಸವನ್ನು ಮಗಳಿಗೆ ವರ್ಗಾಯಿಸಲು ಚಿಂತಿಸುತ್ತಿದ್ದಾರೆ ಜೆಸ್ಸಿಕಾ.