
ನಾಯಿಯನ್ನು ವಾಹನದ ಹಿಂಭಾಗದಲ್ಲಿ ಕಟ್ಟಿ ರಸ್ತೆಯ ಮೇಲೆ ಎಳೆದಾಡಿಕೊಂಡು ಹೋಗಿ ಸಾಯಿಸಿರುವ ಅಮಾನವೀಯ ಘಟನೆ ತ್ರಿಪುರಾದಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದೆ.
ಸಬ್ರೂಮ್-ಅಗರ್ತಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಪ್ರಾಣಿ ಹಿಂಸೆಯ ಘಟನೆ ವರದಿಯಾಗಿದೆ. ವಿಷಯ ತಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ತ್ರಿಪುರಾ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ನಾಯಿ ಮರಿಯನ್ನು ವಾಹನದಲ್ಲಿ ಎಳೆದೊಯ್ದ ಅಮಾನುಷ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ ಎಂದು ಸಿಎಂ ಬರೆದಿದ್ದಾರೆ.
ಪ್ರಾಣಿ ಪ್ರೇಮಿ ಬಿಶಾಲ್ ಸಿಂಗ್ ರಸ್ತೆಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇದನ್ನು ಗಮನಿಸಿದ್ದಾರೆ. ಈ ಬಗ್ಗೆ ವಾಹನದ ಚಾಲಕನನ್ನು ಕೇಳಿದಾಗ, ಇದು ನನ್ನಿಷ್ಟ, ಕೇಳಲು ನೀವ್ಯಾರು ಎಂದು ಪ್ರಶ್ನಿಸಿದ್ದಾನೆ ಎಂದು ವರದಿಯಾಗಿದೆ.