ಅನೇಕರು ತೂಕ ಇಳಿಸಿಕೊಳ್ಳಲು ಬಾಯಿ ಕಟ್ಟಿದ್ರೆ ಮತ್ತೆ ಕೆಲವರು ಹಸಿವೆ ಆಗ್ತಿಲ್ಲ ಎಂಬ ಚಿಂತೆಯಲ್ಲಿರ್ತಾರೆ. ನಿಮಗೂ ಹಸಿವಾಗ್ತಿಲ್ಲ, ಊಟ ಸೇರುತ್ತಿಲ್ಲ ಎಂಬ ಸಮಸ್ಯೆಯಿದ್ರೆ ಇದನ್ನು ಓದಿ. ಸಮಯಕ್ಕೆ ಸರಿಯಾಗಿ ಹಸಿವಾಗ್ತಿಲ್ಲ ಎನ್ನುವವರು ಕೆಲವು ಮನೆಮದ್ದುಗಳನ್ನು ಬಳಸಬಹುದು.
ಹಸಿವಾಗ್ತಿಲ್ಲ ಎನ್ನುವವರು ತ್ರಿಫಲಾ ಚೂರ್ಣವನ್ನು ಸೇವನೆ ಮಾಡಬಹುದು. ಮಲಬದ್ಧತೆ ಸಮಸ್ಯೆಯಿರುವವರು ಇದನ್ನು ಹೆಚ್ಚು ಬಳಸ್ತಾರೆ. ಬೆಚ್ಚಗಿನ ಹಾಲಿಗೆ ಒಂದು ಚಮಚ ತ್ರಿಫಲಾ ಚೂರ್ಣವನ್ನು ಹಾಕಿ ಸೇವನೆ ಮಾಡಬಹುದು. ನಿಯಮಿತ ಸೇವನೆಯಿಂದ ಹಸಿವು ಹೆಚ್ಚಾಗುತ್ತದೆ.
ಗ್ರೀನ್ ಟೀ ಹಸಿವು ಹೆಚ್ಚಿಸುವ ಉತ್ತಮ ಮನೆ ಮದ್ದು. ನಿಯಮಿತ ಸೇವನೆಯಿಂದ ಹಸಿವು ಹೆಚ್ಚಾಗುತ್ತದೆ. ಟೀ-ಕಾಫಿ ಸೇವನೆ ಬದಲು ಗ್ರೀನ್ ಟೀ ಸೇವನೆ ಮಾಡುವುದು ಒಳ್ಳೆಯದು.
ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ನೀರು ಬೇಡ ಎನ್ನುವವರು ನೀರಿಗೆ ನಿಂಬೆ ರಸ ಬೆರೆಸಿ ಸೇವನೆ ಮಾಡಿ. ನಿಂಬೆ ಹಣ್ಣಿನ ಜ್ಯೂಸ್ ಕೂಡ ಬಳಸಬಹುದು.
ಅಜ್ವೈನದ ಸೇವನೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹಸಿವಾಗದ ಸಮಸ್ಯೆಯನ್ನೂ ಅಜ್ವೈನ ಕಡಿಮೆ ಮಾಡುತ್ತದೆ. ಇದರ ಸೇವನೆಯಿಂದ ಹೊಟ್ಟೆ ಸ್ವಚ್ಛವಾಗುತ್ತದೆ. ಸ್ವಲ್ಪ ಬಿಸಿ ಮಾಡಿ ಇದಕ್ಕೆ ಉಪ್ಪು ಬೆರೆಸಿ ಸೇವನೆ ಮಾಡುವವರಿದ್ದಾರೆ. ಹಸಿವಾಗದವರು ದಿನಕ್ಕೆ ಎರಡು ಬಾರಿ ಇದರ ಸೇವನೆ ಮಾಡಬಹುದು.