alex Certify ಗ್ರಾಹಕ ಸೇವಾ ಸಿಬ್ಬಂದಿ ಹೆಸರಿನಲ್ಲಿ ಧೋಖಾ..! ಸಿಮ್​ ಬ್ಲಾಕ್​ ಆಗುತ್ತೆ ಎಂದು ಬೆದರಿಸಿ 13 ಲಕ್ಷ ರೂ. ಪಂಗನಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕ ಸೇವಾ ಸಿಬ್ಬಂದಿ ಹೆಸರಿನಲ್ಲಿ ಧೋಖಾ..! ಸಿಮ್​ ಬ್ಲಾಕ್​ ಆಗುತ್ತೆ ಎಂದು ಬೆದರಿಸಿ 13 ಲಕ್ಷ ರೂ. ಪಂಗನಾಮ

ವ್ಯಕ್ತಿಯ ಮೊಬೈಲ್​ ಫೋನ್​ನಲ್ಲಿ ಆ್ಯಪ್​ ಇನ್​ಸ್ಟಾಲ್​ ಮಾಡಿ ವಂಚಿಸಿದ ಆರೋಪದ ಅಡಿಯಲ್ಲಿ ಚೆನ್ನೈ ನಗರ ಸೈಬರ್​ ಕ್ರೈಂ ಪೊಲೀಸರು ಮೂವರನ್ನು ಕೊಲ್ಕತ್ತಾದಲ್ಲಿ ಬಂಧಿಸಿದ್ದಾರೆ.

ಬಂಧಿತರಿಂದ 20 ಮೊಬೈಲ್​ ಪೋನ್​, 160 ಸಿಮ್​ ಕಾರ್ಡ್, 19 ಡೆಬಿಟ್​ ಕಾರ್ಡ್​, 4 ಸ್ವೈಪಿಂಗ್​ ಮಷಿನ್​ಗಳು, 18 ಗ್ರಾಂ ಚಿನ್ನಾಭರಣ, ಹೋಂಡಾ ಸಿಟಿ ಕಾರು ಹಾಗೂ 11,20,000 ರೂಪಾಯಿ ಮೌಲ್ಯದ ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ವಿಶ್ವಜಿತ್ ಪ್ರಸಾದ್​, ಬಪಿ ಮಂಡಲ್​ ಹಾಗೂ ರಾಮ್​ ಪ್ರಸಾದ್​ ಎಂದು ಗುರುತಿಸಲಾಗಿದೆ.

ಜಮ್​ಶೆಡ್​ಪುರ ನಿವಾಸಿಗಳಾದ ಈ ಮೂವರು ಚೆನ್ನೈನ ವ್ಯಕ್ತಿಯನ್ನು ಕಳೆದ ತಿಂಗಳು ಸಂಪರ್ಕಿಸಿದ್ದರು. ಕಸ್ಟಮರ್​ ಕೇರ್​ ಎಕ್ಸಿಕ್ಯೂಟಿವ್​ ಎಂದು ಪರಿಚಯ ಮಾಡಿಕೊಂಡಿದ್ದ ಈ ಮೂವರು ವ್ಯಕ್ತಿಯಿಂದ ಬರೋಬ್ಬರಿ 13 ಲಕ್ಷ ರೂಪಾಯಿ ವಂಚಿಸಿದ್ದಾರೆ.

ನಿಮ್ಮ ಸಿಮ್​ ಕಾರ್ಡ್​ ವೆರಿಫೈ ಆಗಿಲ್ಲ ಹೀಗಾಗಿ ನಾಳೆಯೇ ನಿಮ್ಮ ಸಿಮ್​ ಬ್ಲಾಕ್​ ಆಗಲಿದೆ. ಇದನ್ನು ತಪ್ಪಿಸಲು ನೀವು ಫಾಸ್ಟ್​ ಸಪೋರ್ಟ್​ ಎಂಬ ಮೊಬೈಲ್​ ಅಪ್ಲಿಕೇಶನ್​ನ್ನು ಇನ್​ಸ್ಟಾಲ್​ ಮಾಡಿ ಹಾಗೂ ಅಲ್ಲಿ ನಿಮ್ಮ ಬ್ಯಾಂಕ್​​ ಮಾಹಿತಿ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ನಮೂದಿಸಿ ಎಂದು ಹೇಳಿದ್ದರು.

ಇವರ ಮಾತನ್ನು ನಂಬಿದ ಚೆನ್ನೈನ ವ್ಯಕ್ತಿ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿದ್ದಾರೆ. ಇದಾದ ಬಳಿಕ ಈ ಖದೀಮರು ವ್ಯಕ್ತಿಯ ಬ್ಯಾಂಕ್​ ಖಾತೆಯಿಂದ ಹಣ ಎಗರಿಸಲು ಆರಂಭಿಸಿದ್ದಾರೆ. ವ್ಯಕ್ತಿಯ ಪತ್ನಿಯ ಮೊಬೈಲ್​ನಲ್ಲೂ ಈ ಅಪ್ಲಿಕೇಶನ್​ ಇನ್​ಸ್ಟಾಲ್​ ಮಾಡಿಸುವಲ್ಲಿ ಆರೋಪಿಗಳು ಯಶಸ್ವಿಯಾಗಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...