ತೃಣಮೂಲ ಕಾಂಗ್ರೆಸ್ ಸಂಸದರಾದ ಮಹುವಾ ಮೊಯಿತ್ರಾ ಅವರು ಕೃಷ್ಣಾನಗರ ಎಂಪಿ ಕಪ್ ಟೂರ್ನಮೆಂಟ್ 2022 ರ ಫೈನಲ್ ಪಂದ್ಯ ವೀಕ್ಷಣೆಗೆ ಹಾಜರಾಗಿದ್ದಾಗ ತಮ್ಮ ಫುಟ್ಬಾಲ್ ಕೌಶಲ್ಯವನ್ನು ಪ್ರದಶಿರ್ಸುವ ಅವಕಾಶ ಬಳಸಿಕೊಂಡರು.
ಆಕೆ ಸೀರೆ ಉಟ್ಟು ಮೈದಾನದಲ್ಲಿ ಆಡುತ್ತಿರುವ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಚೆಂಡನ್ನು ಚೇಸ್ ಮಾಡಿ ಒದೆಯುವುದು ಕಾಣಿಸುತ್ತಿದೆ.
ಕೆಂಪು ಮತ್ತು ಕಿತ್ತಳೆ ಬಣ್ಣದ ಸೀರೆಯನ್ನು ಧರಿಸಿ, ಸನ್ಗ್ಲಾಸ್ ಮತ್ತು ಸ್ಪೋರ್ಟ್ಸ್ ಶೂಗಳನ್ನು ಸಹ ಧರಿಸಿದ್ದರು. ಮೊಯಿತ್ರಾ ಮೊದಲ ಫೋಟೋದಲ್ಲಿ ಚೆಂಡನ್ನು ಒದೆಯುತ್ತಿರುವುದನ್ನು ತೋರಿಸಿದರೆ ಎರಡನೇ ಚಿತ್ರದಲ್ಲಿ ಗೋಲ್ ಕೀಪರ್ ಆಗಿರುವುದನ್ನು ತೋರಿಸುತ್ತದೆ.
ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022ರ ಫೈನಲ್ನ ಮೋಜಿನ ಕ್ಷಣಗಳು. ಹೌದು, ನಾನು ಸೀರೆಯಲ್ಲಿ ಆಡುತ್ತೇನೆ ಎಂದು ಆಕೆ ಬರೆದುಕೊಂಡಿದ್ದಾರೆ.
ಎಂಪಿ ಮಹುವಾ ಮೊಯಿತ್ರಾ ಅವರು ಮೈದಾನದಲ್ಲಿ ಫುಟ್ಬಾಲ್ ಆಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ತೃಣಮೂಲ ಕಾಂಗ್ರೆಸ್ ಖೇಲಾ ಹೋಬ್ ದಿಬಾಸ್ ಆಚರಿಸಿದಾಗ ಫುಟ್ಬಾಲ್ ಆಡಿದ್ದರು.