ಜೈಪುರ: ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯ ಹಳ್ಳಿಯೊಂದರಲ್ಲಿ 21 ವರ್ಷದ ಬುಡಕಟ್ಟು ಮಹಿಳೆಯನ್ನು ಆಕೆಯ ಪತಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದಾನೆ.
ಮಹಿಳೆ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಧರಿಯಾವಾಡದ ಎಸ್‌ಎಚ್‌ಒ ಪೇಶಾವರ್ ಖಾನ್ ಅವರು ಮಾಹಿತಿ ನೀಡಿದ್ದು, ಗುರುವಾರ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಉಮೇಶ್ ಮಿಶ್ರಾ ಮಾತನಾಡಿ, ಮಹಿಳೆಯ ಸಂಬಂಧಿಕರು ಆಕೆಯನ್ನು ಅಪಹರಿಸಿ ಘಟನೆ ನಡೆದ ತಮ್ಮ ಗ್ರಾಮಕ್ಕೆ ಕರೆದೊಯ್ದಿದ್ದಾರೆ. ಆಕೆ ಬೇರೊಬ್ಬ ಪುರುಷನೊಂದಿಗೆ ವಾಸಿಸುತ್ತಿದ್ದರಿಂದ ಆಕೆಯ ಅತ್ತೆಯಂದಿರು ಸಿಟ್ಟಾಗಿದ್ದರು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿರ್ದೇಶನದ ಮೇರೆಗೆ ಡಿಜಿಪಿ ಮಿಶ್ರಾ ಅವರು ಶುಕ್ರವಾರ ರಾತ್ರಿ ಎಡಿಜಿ(ಅಪರಾಧ) ದಿನೇಶ್ ಎಂಎನ್ ಅವರನ್ನು ಪ್ರತಾಪಗಢಕ್ಕೆ ಕಳುಹಿಸಿದ್ದಾರೆ. ಜಿಲ್ಲೆಯ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಜನರ ಸಮ್ಮುಖದಲ್ಲಿಯೇ ವಿವಸ್ತ್ರಗೊಳಿಸಿ ಆಕೆಯನ್ನು ವಿವಸ್ತ್ರವಾಗಿ ಮೆರವಣಿಗೆ ಮಾಡುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ರಾಜ್ಯ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಡಿಜಿ ದಿನೇಶ್ ಅವರನ್ನು ಪ್ರತಾಪಗಢಕ್ಕೆ ಕಳುಹಿಸಲಾಗಿದೆ ಎಂದು ಜೈಪುರದಲ್ಲಿ ಡಿಜಿಪಿ ಮಿಶ್ರಾ ಹೇಳಿದ್ದಾರೆ.
ಆರೋಪಿಗಳನ್ನು ಬಂಧಿಸಲು ಆರು ತಂಡಗಳನ್ನು ರಚಿಸಲಾಗಿದ್ದು, ಪ್ರತಾಪಗಢ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.