ಆಂಬುಲೆನ್ಸ್ ಬರಲು ಸಾಧ್ಯವಾಗದೇ ಇದ್ದ ಕಾರಣದಿಂದ ಆದಿಜನಾಂಗಕ್ಕೆ ಸೇರಿದ ತುಂಬು ಗರ್ಭಿಣಿಯೊಬ್ಬರನ್ನು ಬಟ್ಟೆ ಹಾಗೂ ಕೋಲುಗಳಿಂದ ಜೋಳಿಗೆ ಕಟ್ಟಿಕೊಂಡು ಎಂಟು ಕಿಮೀ ಹೊತ್ತೊಯ್ದ ಘಟನೆ ಮಧ್ಯ ಪ್ರದೇಶದ ಭರ್ವಾನಿ ಜಿಲ್ಲೆಯಲ್ಲಿ ಘಟಿಸಿದೆ.
ಸುನಿತಾ ಎಂಬ 20 ವರ್ಷದ ಈ ಗರ್ಭಿಣಿ ಮಹಿಳೆ ಕಾಡಿನೊಳಗಿರುವ ರಾಜ್ಪುರಾ ಎಂಬ ಪುಟ್ಟ ಗ್ರಾಮದವರಾಗಿದ್ದಾರೆ. ಪ್ರಸವ ವೇದನೆ ಕಾಣಿಸಿಕೊಂಡ ಬೆನ್ನಿಗೆ ಈಕೆಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಬೇಕಾಗಿತ್ತು. ಆದರೆ ವಾಹನ ಚಲಿಸಬಲ್ಲ ರಸ್ತೆ ಇಲ್ಲದೇ ಇದ್ದ ಕಾರಣ, ಆಕೆಯನ್ನು 20 ಕಿಮೀ ದೂರದಲ್ಲಿದ್ದ ಆಸ್ಪತ್ರೆಗೆ ಸಾಗಿಸುವುದು ಭಾರೀ ದುಸ್ತರವಾಗಿತ್ತು.
ಒಂದೇ ಕಡೆ ಕೂತು ಕೆಲಸ ಮಾಡಿದರೆ ಕಾಡುತ್ತೆ ಈ ಸಮಸ್ಯೆ: ತಜ್ಞ ವೈದ್ಯರ ವಾರ್ನಿಂಗ್
ಆಕೆಯನ್ನು ಹತ್ತಿರದ ಪನ್ಸೆಮಾಲ್ ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್‌ಗೆ ಕರೆ ಮಾಡಿದರೂ ಸಹ ಅದು ಊರಿಗೆ ಬರಲು ಸಾಧ್ಯವಿರಲಿಲ್ಲ. ಹೀಗಾಗಿ ಸುನಿತಾರನ್ನು ಆಂಬುಲೆನ್ಸ್‌ನಲ್ಲಿ ಕೂರಿಸಲು ಜೋಳಿಗೆಯಲ್ಲಿ ಹೊತ್ತೊಯ್ಯಲಾಗಿದೆ. ಇದೇ ವೇಳೆ ಗ್ರಾಮಸ್ಥರು ಹಾದಿಯಲ್ಲಿದ್ದ ಗುಂಡಿಗಳನ್ನು ಮುಚ್ಚಲು ಗುದ್ದಲಿಗಳು ಹಾಗೂ ಹಾರೆಗಳಿಂದ ಸಮತಟ್ಟು ಮಾಡುತ್ತಿರುವುದನ್ನು ಸಹ ನೋಡಬಹುದಾಗಿದೆ.
ಪನ್ಸೆಮಾಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಮಹಿಳೆ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ.