ತನ್ನೂರಿನ ಜನರ ದಾಹ ನೀಗಿಸಲು 500 ಅಡಿ ಬಾವಿ ತೋಡಿದ ಯುವತಿ 03-10-2021 12:18PM IST / No Comments / Posted In: Latest News, India, Live News ಒಡಿಶಾದ ಮಲ್ಕಾಂಗಿರಿ ಜಿಲ್ಲೆಯ ಘಾಟಿ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಸೇರಿದ ಮಾಲತಿ ಶಿಶಾ ಎಂಬ ಯುವತಿಯೊಬ್ಬರು ಏಕಾಂಗಿಯಾಗಿ 500 ಅಡಿ ಬಾವಿ ತೋಡುವ ಮೂಲಕ ಸದ್ದು ಮಾಡಿದ್ದಾರೆ. ದಿನಗೂಲಿ ನೌಕರರೊಬ್ಬರ ಪುತ್ರಿಯಾದ ಮಾಲತಿ, ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಸಹ ಇನ್ನೂ ಕೆಲಸಕ್ಕಾಗಿ ಹುಡುಕುತ್ತಿದ್ದಾರೆ. ಈಗ ಕಾಫಿಯಲ್ಲೂ ಪಡೆಯಬಹುದು ಸ್ನಾತಕೋತ್ತರ ಪದವಿ..! ಭುವನೇಶ್ವರದಲ್ಲಿ ಶೈಕ್ಷಣಿಕ ಅಧ್ಯಯನ ಮುಗಿಯುತ್ತಲೇ ತಮ್ಮ ಊರಿಗೆ ಮರಳಿದ ಮಾಲತಿ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿರುವುದನ್ನು ಕಂಡಿದ್ದಾರೆ. ಕೂಡಲೇ ಇದಕ್ಕೆ ಪರಿಹಾರ ಕಂಡುಕೊಳ್ಳಲು ಖುದ್ದು ಮುಂದಾದ ಮಾಲತಿ ತಮ್ಮದೇ ಕೈಗಳಿಂದ ಬಾವಿ ತೋಡಲು ಮುಂದಾಗಿದ್ದಾರೆ. ಮಾಲತಿ ಅವರ ಈ ಪರಿಶ್ರಮದಲ್ಲಿ ಅವರ ತಂದೆ, ಸಹೋದರ ಹಾಗೂ ನಾಲ್ವರು ಸಹೋದರಿಯರು ಕೈ ಜೋಡಿಸಿದ್ದಾರೆ. ಇವರನ್ನು ಕಂಡ ಊರಿನ ಮಿಕ್ಕ ಮಂದಿ ತಾವೂ ಸಹ ಬಾವಿ ತೋಡಲು ಆರಂಭಿಸಿದ್ದಾರೆ. ಪರಿಣಾಮ ಆ ಊರಿನಲ್ಲಿ ಈಗ 3-4 ಬಾವಿಗಳು ಇವೆ. ಆಧಾರ್‌ಗೆ ಮೊಬೈಲ್ ನಂಬರ್ ಜೋಡಣೆ ಮಾಡಬೇಕಾ….? ನಂಬರ್ ಬದಲಾವಣೆ ಮಾಡಬೇಕಾ…..? ಹೀಗೆ ಮಾಡಿ ತನ್ನೂರಿನ ದಾಹ ನೀಗಿಲು ಮಾಡಿದ ಈ ಭಗೀರಥ ಪ್ರಯತ್ನದಿಂದಾಗಿ ಮಾಲತಿರನ್ನು ’ನೀರಿನ ರಾಣಿ’ ಎಂಬ ಹೆಸರಿನಿಂದ ಸ್ಥಳೀಯರು ಗುರುತಿಸುತ್ತಾರೆ.