ತೆಲಂಗಾಣ: ತೆಲಂಗಾಣದ ಬುಡಕಟ್ಟು ಕುಗ್ರಾಮವೊಂದರ ಸ್ಥಳೀಯರು ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಜೀವನದಲ್ಲಿ ಒಮ್ಮೆ ತಲೆ ಮತ್ತು ಹುಬ್ಬು ಬೋಳಿಸಿಕೊಳ್ಳುವ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೆ.
ಯಾವುದೇ ಕಾರಣಕ್ಕೂ ಈ ಆಚರಣೆ ಇದುವರೆಗೆ ನಿಂತಿಲ್ಲ. ಇಲ್ಲಿಯ ರಾಜಕಾರಣಿಗಳು ಕೂಡ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ ಎನ್ನುವುದು ವಿಶೇಷ.
ಕಲ್ಲೂರುಗುಡ ಗುಡೆಮ್ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಉಟ್ನೂರ್ ಮಂಡಲದಲ್ಲಿರುವ ಬುಡಕಟ್ಟು ಜನಾಂಗದಲ್ಲಿ ಈ ಸಂಪ್ರದಾಯ ತಲೆತಲಾಂತರಗಳಿಂದ ಇದೆ. ಕುಗ್ರಾಮದ ಸ್ಥಳೀಯರು ಎತ್ಮಾಸುರ ದೇವತೆಯನ್ನು ತಮ್ಮ ಕುಲದೇವತೆ ಎಂದು ಗೌರವಿಸುತ್ತಾರೆ. ಅವರು ದೀಪಾವಳಿ ಆಚರಣೆಯ ಕೆಲವು ದಿನಗಳ ಮೊದಲು ತಲೆ ಮತ್ತು ಹುಬ್ಬುಗಳ ಕೂದಲು ತೆಗೆದು ಬೋಳಿಸಿಕೊಳ್ಳುತ್ತಾರೆ.
ಈ ನಿಯಮ ಪಾಲನೆ ಮಾಡಿದ್ದರೆ ಅಂಥವರು ಕೃಷಿ ಚಟುವಟಿಕೆಗಳಲ್ಲಿ ಮತ್ತು ಇತರ ಜೀವನೋಪಾಯದ ಕೆಲಸಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ. ಕೂದಲು ತೆಗೆದ ನಂತರ ತಮ್ಮನ್ನು ಶುದ್ಧೀಕರಿಸಿಕೊಳ್ಳುತ್ತಾರೆ. ಹೀಗೆ ಮಾಡಿದರೆ ತಾವು ಶುದ್ಧರಾಗಿರುವುದಾಗಿ ಅವರ ನಂಬಿಕೆ. ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿಯನ್ನು ಲೆಕ್ಕಿಸದೆ, ಕುಗ್ರಾಮಕ್ಕೆ ಸೇರಿದ ಪ್ರತಿಯೊಬ್ಬ ವ್ಯಕ್ತಿಯು ಜೀವಿತಾವಧಿಯಲ್ಲಿ ಒಮ್ಮೆ ತಮ್ಮ ಹುಬ್ಬುಗಳನ್ನು ತೆಗೆಯಬೇಕಾಗುತ್ತದೆ.
ಸುಮಾರು 20 ವರ್ಷಗಳ ನಂತರ ಇತ್ತೀಚೆಗೆ ನಡೆದ ದೀಪಾವಳಿ ಆಚರಣೆಗೆ ಕೆಲವು ದಿನಗಳ ಮೊದಲು ಸಂಪ್ರದಾಯದ ಪ್ರಕಾರ, ಕಲ್ಲೂರುಗುಡ ಗುಡ್ಡೆಂನ ಸ್ಥಳೀಯರು ಮಕ್ಕಳಿಗೆ ತಲೆ ಮತ್ತು ಹುಬ್ಬ ಬೋಳಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಅವರು ವಿಶೇಷ ಕ್ಷೌರಿಕರನ್ನು ಕರೆಸಿದ್ದರು. ಸುಮಾರು 40 ಮಕ್ಕಳ ತಲೆ ಬೋಳಿಸಲಾಗಿದೆ ಮತ್ತು ಅವರ ಹುಬ್ಬುಗಳನ್ನು ತೆಗೆಯಲಾಗಿದೆ.
ಬುಡಕಟ್ಟು ಕುಗ್ರಾಮದ ಸ್ಥಳೀಯರು ಕ್ಷೌರಿಕರಿಗೆ ಹೊಸ ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ನೀಡಿ ಗೌರವಿಸಿದರು. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಸದಸ್ಯ ವೇದ್ಮ ಬೊಜ್ಜು ಅವರ ಇಬ್ಬರು ಮಕ್ಕಳು ಸಹ ಗ್ರಾಮದ ಪಟೇಲ್ ಅತ್ರಮ್ ಸೋನೆ ರಾವ್ ಮತ್ತು ಇತರ ಬುಡಕಟ್ಟು ಕುಗ್ರಾಮ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.