ಡಿಸೆಂಬರ್ 2021ರೊಳಗೆ ಭಾರತದಲ್ಲಿ ಡಿಜಿಟಲ್ ರೂಪಾಯಿಯ ಮೊದಲ ಪ್ರಾಯೋಗಿಕ ಪರೀಕ್ಷೆ ಆರಂಭವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ಸಿಬಿಡಿಸಿ ಎಂದೂ ಕರೆಯುತ್ತಾರೆ.
ಡಿಜಿಟಲ್ ಕರೆನ್ಸಿಯನ್ನು ಆನ್‌ಲೈನ್‌ನಲ್ಲಿ ಕಾನೂನುಬದ್ಧ ಟೆಂಡರ್ ಆಗಿ ನೀಡಲಾಗುತ್ತದೆ. ಇದು, ಡಿಜಿಟಲ್ ರೂಪಾಯಿ ಚಲಾವಣೆಯಲ್ಲಿರುವ ಫಿಯಟ್ ಕರೆನ್ಸಿಯ ಆನ್‌ಲೈನ್ ಆವೃತ್ತಿಯಾಗಿದೆ.
ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡಿಜಿಟಲ್ ಕರೆನ್ಸಿಯ ಬಗ್ಗೆ ಆರ್‌ಬಿಐ ಬಹಳ ಎಚ್ಚರಿಕೆ ಮತ್ತು ಜಾಗರೂಕತೆಯಿಂದಿದೆ. ಡಿಜಿಟಲ್ ಕರೆನ್ಸಿಯ ಭದ್ರತೆ, ಹಣಕಾಸು ನೀತಿ, ಅದರ ಪ್ರಭಾವ ಮತ್ತು ಚಲಾವಣೆಯಲ್ಲಿರುವ ನಗದು ಸೇರಿದಂತೆ ವಿವಿಧ ಅಂಶಗಳನ್ನು ಆರ್‌ಬಿಐ ಗಮನಿಸುತ್ತಿದೆ ಎಂದವರು ಹೇಳಿದ್ದಾರೆ. ಇದೊಂದು ಹೊಸ ಉತ್ಪನ್ನವಾಗಿದ್ದು, ಇದ್ರ ಬಗ್ಗೆ ತುಂಬಾ ಗಂಭೀರವಾಗಿದ್ದೇವೆಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಯುಕೆ, ಚೀನಾ ಮತ್ತು ಯುರೋಪ್ ಸೇರಿದಂತೆ ಹಲವಾರು ಪ್ರಮುಖ ದೇಶಗಳು ಡಿಜಿಟಲ್ ಕರೆನ್ಸಿಗಳ ಬಳಕೆಯನ್ನು ಜಾರಿಗೆ ತಂದಿವೆ. ಬಿಟ್‌ಕಾಯಿನ್‌ನ ಜನಪ್ರಿಯತೆ ಹೆಚ್ಚಾದ ನಂತರ ಆರ್‌ಬಿಐ ಮೇಲಿನ ಒತ್ತಡ ಹೆಚ್ಚಾಗಿತ್ತು. ಆರ್ಬಿಐ ಬಿಟ್ ಕಾಯಿನ್ ನಿಷೇಧಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಅದರ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.