ಬಾಲಿವುಡ್ ನಟ ಹೃತಿಕ್ ರೋಷನ್ ಕುಟುಂಬ ಬಹಳ ಸಂಭ್ರಮ-ಸಡಗರದಿಂದ ದೀಪಾವಳಿ ಹಬ್ಬ ಆಚರಿಸಿದೆ. ಹೃತಿಕ್ ರೋಷನ್ ಹಾಗೂ ಅವರ ತಾಯಿ ಪಿಂಕಿ ರೋಷನ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪಿಂಕಿ ರೋಷನ್ ಅವರು ಹಂಚಿಕೊಂಡಿದ್ದಾರೆ.
ಸಂತೋಷದಿಂದ ದೀಪಾವಳಿ ಹಬ್ಬ ಆಚರಿಸಿರುವ ರೋಷನ್ ಕುಟುಂಬ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ತಾಯಿ-ಮಗನ ಅದ್ಭುತ ನೃತ್ಯಕ್ಕೆ ನೆಟ್ಟಿಗರು ತಲೆದೂಗಿದ್ದಾರೆ. ದಿಲ್ ಬೋಲೆ ಬೂಮ್ ಬೂಮ್ ಹಾಡಿಗೆ ಇವರಿಬ್ಬರೂ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
BIG NEWS: ರೈತರು, ಕಾಂಗ್ರೆಸ್ ಕಾರ್ಯಕರ್ತರ ಕೈ ಕತ್ತರಿಸಿ, ಕಣ್ಣು ಕಿತ್ತು ಹಾಕ್ತೇವೆ; ಬಿಜೆಪಿ ಸಂಸದ ಬೆದರಿಕೆ
ರೋಷನ್ ಮನೆಯಲ್ಲಿನ ದೀಪಾವಳಿ ಸಂಭ್ರಮದಲ್ಲಿ ನಾಡಿಯಾ ಹಸನ್ ಹಾಡುಗಳಿಂದ ತುಂಬಿತ್ತು. ಹೃತಿಕ್ ಅವರ ಪೋಷಕರು, ರಾಕೇಶ್ ರೋಷನ್ ಮತ್ತು ಪಿಂಕಿ ರೋಷನ್ ಮತ್ತು ಅವರ ಕುಟುಂಬ ಸದಸ್ಯರು ದೀಪಗಳನ್ನು ಹಚ್ಚಿ, ಸ್ಪಾರ್ಕಲ್ಸ್ ಅನ್ನು ಕೈಯಲ್ಲಿ ಹಿಡಿದು ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ.
ರೋಷನ್ ನಿವಾಸದಲ್ಲಿ ದೀಪಾವಳಿ ಅದ್ಧೂರಿಯಾಗಿ ನಡೆಯಿತು. ಹೃತಿಕ್ ರೋಷನ್, ಅವರ ಸಹೋದರಿ ಸುನೈನಾ ರೋಷನ್ ಮತ್ತು ಅವರ ಪೋಷಕರಾದ ರಾಕೇಶ್ ರೋಷನ್ ಮತ್ತು ಪಿಂಕಿ ರೋಷನ್ ಅವರನ್ನೊಳಗೊಂಡ ಕುಟುಂಬದ ಸದಸ್ಯರ ಕೆಲವು ಫೋಟೋಗಳನ್ನು ಕೂಡ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಹೃತಿಕ್ ರೋಷನ್ ಕೂಡ ತನ್ನ ಕುಟುಂಬದ ಸುಮಧುರ ಕ್ಷಣಗಳ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
https://youtu.be/TNQkgsHq0Jo