ಬೆಂಗಳೂರು: ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದವರಿಗೆ 1527 ವೈದ್ಯಕೀಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗಳ ನಗದುರಹಿತ ಸೌಲಭ್ಯ ನೀಡಲು ಸರ್ಕಾರ ಆರೋಗ್ಯ ಸಿರಿ ಯೋಜನೆಯನ್ನು ರೂಪಿಸಿದ್ದು, ಶೀಘ್ರವೇ ಜಾರಿಗೊಳಿಸಲಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವರದಿ ಸಿದ್ದಪಡಿಸಿದ್ದು, ಹಣಕಾಸು ಇಲಾಖೆಗೆ ಒಪ್ಪಿಸಿದೆ. ಶೀಘ್ರವೇ ರಾಜ್ಯ ಸರ್ಕಾರದ ಆದೇಶ ಹೊರಬೀಳಲಿದೆ. ಸರ್ಕಾರಿ ನೌಕರರು ನಗದು ರಹಿತವಾಗಿ 1527 ಚಿಕಿತ್ಸೆ, ಶಸ್ತ್ರಚಿಕಿತ್ಸೆ ಸೌಲಭ್ಯ ಪಡೆಯಬಹುದು. ಇದರಿಂದ ಸರ್ಕಾರಿ ಮತ್ತು ಅವರ ಅವಲಂಬಿತ ಕುಟುಂಬಸ್ಥರು ಸೇರಿ ರಾಜ್ಯದ 28 ಲಕ್ಷ ಜನರಿಗೆ ಅನುಕೂಲವಾಗುತ್ತದೆ.
ಆರೋಗ್ಯ ಸಿರಿ ಯೋಜನೆಯಲ್ಲಿ ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸಾ ವೆಚ್ಚಕ್ಕೆ ಮಿತಿಯಿರುವುದಿಲ್ಲ. ಗಂಭೀರ ಕಾಯಿಲೆಗಳಿಗೂ ನಗದು ರಹಿತ ಚಿಕಿತ್ಸೆ ಸೌಲಭ್ಯವಿರುತ್ತದೆ ಎಂದು ಹೇಳಲಾಗಿದೆ.