ಕೊರೊನಾ ಲಸಿಕೆ ಅಭಿಯಾನದಲ್ಲಿ ಭಾರತ ವಿಶ್ವದಾಖಲೆ ಮಾಡಿದೆ. ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆ ನೀಡಿದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮಧ್ಯೆ ಲಸಿಕೆ ಅಭಿಯಾನಕ್ಕೆ ಯುರೋಪಿಯನ್ ಯೂನಿಯನ್ ನಿಂದ ದೊಡ್ಡ ಹೊಡೆತ ಬಿದ್ದಿದೆ. ಕೋವಿಶೀಲ್ಡ್ ಲಸಿಕೆ ಪಡೆದ ಪ್ರಯಾಣಿಕರಿಗೆ ಇಯು ಗ್ರೀನ್ ಪಾಸ್ ನೀಡದಿರಲು ಮುಂದಾಗಿದೆ. ಕೋವಿಶೀಲ್ಡನ್ನು ಇಯು ಗ್ರೀನ್ ಪಟ್ಟಿಯಲ್ಲಿ ಸೇರಿಸಿಲ್ಲ.
ಜುಲೈ 1 ರಿಂದ, ಎಲ್ಲಾ ಇಯು ಸದಸ್ಯ ರಾಷ್ಟ್ರಗಳಿಗೆ ಡಿಜಿಟಲ್ ಸಿಒವಿಐಡಿ ಪ್ರಮಾಣಪತ್ರವನ್ನು ನೀಡಲಾಗುವುದು. ಇದನ್ನು ಗ್ರೀನ್ ಪಾಸ್ ಎಂದೂ ಕರೆಯುತ್ತಾರೆ. ನಾಲ್ಕು ಲಸಿಕೆಗಳನ್ನು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಅಂಗೀಕರಿಸಿದೆ. ಫಿಜರ್/ಬಯೋಟೆಕ್‌ನ ಕೊಮಿರ್ನಾಟಿ, ಮಾಡರ್ನಾ, ಅಸ್ಟ್ರಾಜೆನೆಕಾ-ಆಕ್ಸ್ ಫರ್ಡ್‌ನ ವ್ಯಾಕ್ಸ್ ಜೆವೇರಿಯಾ ಮತ್ತು ಜಾನ್ಸನ್ ಮತ್ತು ಜಾನ್ಸನ್ n ಜೆನ್ಸನ್ ನ್ನು ಇಎಂಎ ಅನುಮೋದಿಸಿದೆ.
ಭಾರತದಲ್ಲಿ ತಯಾರಾದ ಕೋವಿಶೀಲ್ಡ್ ಅನ್ನು ಇಎಂಎ ಇನ್ನೂ ಅನುಮೋದಿಸಿಲ್ಲ. ಆದರೆ ಕೋವಿಶೀಲ್ಡ್ ಲಸಿಕೆಯನ್ನೂ ಅಸ್ಟ್ರಾಜೆನೆಕಾ-ಆಕ್ಸ್ ಫರ್ಡ್ ತಯಾರಿಸಿದೆ. ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದೆ.