ಜಗತ್ತು ನೋಡುವ ಆಸೆ ಅನೇಕರಿಗಿರುತ್ತದೆ. ಕೊರೊನಾಗಿಂತ ಮೊದಲು ಅನೇಕರು ವಿದೇಶಿ ಪ್ರವಾಸಕ್ಕೆ ಹೋಗ್ತಿದ್ದರು. ಕೊರೊನಾ ನಂತ್ರ ಇವರ ಸಂಖ್ಯೆ ಕಡಿಮೆಯಾಗಿದೆ. ಜನರು ಹತ್ತಿರದ ಪ್ರಯಾಣಕ್ಕೆ ಕಾರ್, ಬಸ್, ರೈಲನ್ನು ಬಳಸ್ತಾರೆ. ವಿದೇಶಿ ಪ್ರಯಾಣಕ್ಕೆ ವಿಮಾನ ಬೆಸ್ಟ್. ಆದ್ರೆ ವಿಮಾನದ ಬದಲು ಬಸ್ ನಲ್ಲಿಯೇ ಲಂಡನ್ ಗೆ ಹೋಗುವ ಅವಕಾಶ ಸಿಗ್ತಿದೆ.
ದೆಹಲಿಯಿಂದ ಲಂಡನ್ಗೆ ಬಸ್ ಸೇವೆ ಪ್ರಾರಂಭವಾಗಲಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಐಷಾರಾಮಿ ಬಸ್ ಸೇವೆ ಸೆಪ್ಟೆಂಬರ್ ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಇಂಡೋ-ಮ್ಯಾನ್ಮಾರ್ ಗಡಿಯ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು.
46 ವರ್ಷಗಳ ಹಿಂದೆ ಅಂತಹ ಸೇವೆಯನ್ನು ಭಾರತದಿಂದ ಪ್ರಾರಂಭಿಸಲಾಗಿತ್ತು. ಆದ್ರೆ ಅದು ಯಶಸ್ವಿಯಾಗ್ಲಿಲ್ಲ. 1957 ರಲ್ಲಿ, ಬ್ರಿಟಿಷ್ ಕಂಪನಿಯು ದೆಹಲಿ-ಲಂಡನ್-ಕೋಲ್ಕತ್ತಾ ನಡುವೆ ಬಸ್ ಸೇವೆಯನ್ನು ಪ್ರಾರಂಭಿಸಿತ್ತು. ಕೆಲವು ವರ್ಷಗಳ ನಂತರ ಈ ಬಸ್ ಅಪಘಾತಕ್ಕೀಡಾದ ಕಾರಣ ಸಂಚಾರ ರದ್ದಾಯ್ತು. ಸಿಡ್ನಿ-ಭಾರತ-ಲಂಡನ್ ನಡುವೆಯೂ ಬಸ್ ವ್ಯವಸ್ಥೆ ಇತ್ತು. ಆದ್ರೆ 1976 ರಲ್ಲಿ ಇರಾನ್ನಲ್ಲಿನ ಪರಿಸ್ಥಿತಿ ಮತ್ತು ಭಾರತ -ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಕಾರಣಕ್ಕೆ ಸಂಚಾರ ಬಂದ್ ಮಾಡಲಾಗಿತ್ತು. ಈ ಪ್ರಯಾಣಕ್ಕೆ ಪ್ರಯಾಣಿಕರು 20 ಸಾವಿರ ಡಾಲರ್ ಅಂದರೆ ಸುಮಾರು 15 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಟಿಕೆಟ್ಗಳು, ವೀಸಾ ಮತ್ತು ವಸತಿ ಮುಂತಾದ ಎಲ್ಲಾ ಸೌಲಭ್ಯ ಇದ್ರಲ್ಲಿರಲಿದೆ. 70 ದಿನಗಳ ಪ್ರಯಾಣ ಇದಾಗಿದ್ದು, ಬಸ್ ಸುಮಾರು 20 ಸಾವಿರ ಕಿಲೋಮೀಟರ್ ದೂರ ಕ್ರಮಿಸಲಿದೆ.