ಬೇರೆ ಊರಿಗೆ ಹೋದಾಗ ಸಾಮಾನ್ಯವಾಗಿ ಹೊಟೇಲ್ ನಲ್ಲಿ ಉಳಿದುಕೊಳ್ಳುತ್ತೇವೆ. ಪಂಚತಾರಾ ಹೊಟೇಲ್ ಅಲ್ಲದೆ ಸಾಮಾನ್ಯವಾಗಿ ಎಲ್ಲಾ ಹೊಟೇಲ್ ಗಳಲ್ಲೂ ಈಗ ಉತ್ತಮ ಸೌಲಭ್ಯ ನೀಡಲಾಗ್ತಿದೆ. ಹೊಟೇಲ್ ಗೆ ಹೋಗುವ ವೇಳೆ ಟೂತ್ ಪೇಸ್ಟ್, ಸೋಪ್, ಟವೆಲ್ ತೆಗೆದುಕೊಂಡು ಹೋಗಬೇಕಾಗಿಲ್ಲ. ಬಹುತೇಕ ಹೊಟೇಲ್ ಗಳು ಇದನ್ನು ಒದಗಿಸುತ್ತವೆ.
ʼಮುತ್ತುʼ ಕೊಡಲೊಲ್ಲದ ಯುವಕನನ್ನು ಗುಂಡಿಟ್ಟು ಕೊಂದ ಮಹಿಳೆ
ಹೊಟೇಲ್ ನಲ್ಲಿರುವ ಟವೆಲ್, ಕರವಸ್ತ್ರ, ಸ್ಪೂನ್ ಅನೇಕರನ್ನು ಆಕರ್ಷಿಸುತ್ತದೆ. ಪಂಚತಾರಾ ಹೊಟೇಲ್ ನಲ್ಲಿ ಉಳಿದುಕೊಳ್ಳುವ ಸಾಮರ್ಥ್ಯವಿರುವವರು ಕೂಡ ಈ ವಸ್ತುಗಳನ್ನು ಹೊಟೇಲ್ ನಿಂದ ಕದ್ದು ತರುವುದನ್ನು ನಾವು ಕೇಳಿದ್ದೇವೆ. ಅನೇಕ ಕಲಾವಿದರು, ಹೊಟೇಲ್ ನಿಂದ ಈ ವಸ್ತುಗಳನ್ನು ಕದ್ದು ತಂದಿರುವುದಾಗಿ ಹೇಳಿದ್ದಾರೆ.
ಕೆಲ ಹೊಟೇಲ್ ಗಳಲ್ಲಿ ಈ ವಸ್ತುಗಳನ್ನು ಕದ್ದು ತರಬೇಕಾಗಿಲ್ಲ. ನೀವು ಆರಾಮವಾಗಿ ಕೆಲ ವಸ್ತುಗಳನ್ನು ತರಬಹುದು.
ಸರ್ಕಾರಿ ನೌಕರರಿಗೆ ಕೇಂದ್ರದಿಂದ ಸ್ಪೆಷಲ್ ಗಿಫ್ಟ್: ಹಬ್ಬಕ್ಕೆ ಬೋನಸ್
ಕಾಫಿ ಅಥವಾ ಚಹಾ ಪ್ಯಾಕ್, ಟೂತ್ ಬ್ರಷ್ ಮತ್ತು ಟೂತ್ ಪೇಸ್ಟ್ ಗಳನ್ನು ಅತಿಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಹೋಟೆಲ್‌ನಿಂದ ಚೆಕ್ ಔಟ್ ಮಾಡುವಾಗ, ಬಳಸಿ ಉಳಿದ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು. ಹೋಟೆಲ್‌ಗಳಿಗೆ ಇದರಿಂದ ಯಾವುದೇ ನಷ್ಟವಿಲ್ಲ. ಇದರಿಂದ ಕೆಲ ಹೊಟೇಲ್ ಗಳಿಗೆ ಲಾಭವಿದೆ. ಉಚಿತವಾಗಿ ಹೊಟೇಲ್ ಗೆ ಪ್ರಚಾರ ಸಿಗುತ್ತದೆ. ಕೆಲ ಹೊಟೇಲ್ ಗಳು ಈ ವಸ್ತುಗಳ ಮೇಲೆ ತಮ್ಮ ಲೋಗೋ ಹಾಕಿರುತ್ತವೆ. ಅತಿಥಿಯು ಟೂತ್ ಪೇಸ್ಟ್ ಮತ್ತು ಬ್ರಷ್ ತೆಗೆದುಕೊಂಡರೆ ಅದ್ರಿಂದ ಪ್ರಚಾರ ಸಿಗುತ್ತದೆ.