ದೇವಾಲಯದ ಆವರಣದಲ್ಲಿ ಆರ್ ಎಸ್ ಎಸ್ ಆಯೋಜಿಸುವ ಸಾಮೂಹಿಕ ಕಸರತ್ತು ಮತ್ತು ಇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಮ್ಮ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ.
ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೇ 18 ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. TDB ಯ ಹೊಸ ಸುತ್ತೋಲೆಯು ಮಾರ್ಚ್ 30, 2021 ರಂದು ಹೊರಡಿಸಿದ ಆದೇಶದ ಪುನರಾವರ್ತನೆಯಾಗಿದೆ.
ದೇವಾಲಯದ ಆಚರಣೆಗಳು ಮತ್ತು ಉತ್ಸವಗಳನ್ನು ಹೊರತುಪಡಿಸಿ ದೇವಾಲಯದ ಆವರಣವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಬಾರದು ಎಂದು ಟಿಡಿಬಿ ಹೇಳಿದೆ. ತನ್ನ ದೇವಾಲಯದ ಆವರಣದಲ್ಲಿ ಆರ್ ಎಸ್ ಎಸ್ ಶಾಖೆಗಳು ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದ ಟಿಡಿಬಿ ಆದೇಶವನ್ನು ಮರು ಹೊರಡಿಸಿದೆ.
ಟಿಡಿಬಿಯ ಆದೇಶದ ವಿರುದ್ಧ ಆರ್ ಎಸ್ ಎಸ್ ಕಿಡಿಕಾರಿದೆ. ಇದು ಅಸಂವಿಧಾನಿಕ ನಡೆ, ಸಂವಿಧಾನದ ಕಗ್ಗೊಲೆ ಎಂದಿದೆ. ಇತ್ತ ಕಾಂಗ್ರೆಸ್ ಆದೇಶವನ್ನ ಸ್ವಾಗತಿಸಿದೆ.