ಬೆಂಗಳೂರು : ಟ್ರಕ್ ನಲ್ಲಿ ಹಸು ಮಾಂಸ ತ್ಯಾಜ್ಯ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ ಅವರಿಗೆ ಮನವಿ ಮಾಡಿ ನಟಿ ಐಂದ್ರಿತಾ ರೈ ಟ್ವೀಟ್ ಮಾಡಿದ್ದಾರೆ.
ಟ್ರಕ್ ನಲ್ಲಿ ಹಸು ಮಾಂಸ ತ್ಯಾಜ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ನೀವು ಈ ಬಗ್ಗೆ ಗಮನ ಹರಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಟ್ವೀಟ್ ಮೂಲಕ ನಟಿ ಐಂದ್ರಿತಾ ರೈ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.
ಇನ್ನೂ ನಟಿ ಐಂದ್ರಿತಾ ರೈ ಆರೋಪಕ್ಕೆ ಡಿಸಿಪಿ ಸಿ.ಕೆ.ಬಾಬಾ ಸ್ಪಷ್ಟನೆ ನೀಡಿದ್ದು, ಟ್ರಕ್ನಲ್ಲಿದ್ದ ಮಾಂಸದ ತ್ಯಾಜ್ಯ ಪರಿಶೀಲನೆ ನಡೆಸಲಾಗಿದೆ. ಟ್ರಕ್ನಲ್ಲಿದ್ದದ್ದು ಹಸು ಮಾಂಸದ ತ್ಯಾಜ್ಯವಲ್ಲ. ಪತ್ತೆಯಾದ ತ್ಯಾಜ್ಯ ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಪಟ್ಟಿದ್ದು ಎಂದು ಹೇಳಿದ್ದಾರೆ.
ಟ್ರಕ್ನಲ್ಲಿ ದನದ ಮಾಂಸದ ತ್ಯಾಜ್ಯ ಸಾಗಣೆ ಮಾಡಲಾಗುತ್ತಿತ್ತು. ಸಾಗಣೆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ನಟಿ ಐಂದ್ರಿತಾ ರೈ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಾಕಿ. ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದರು.
https://twitter.com/AindritaR/status/1699405309960143042?ref_src=twsrc%5Etfw%7Ctwcamp%5Etweetembed%7Ctwterm%5E1699405309960143042%7Ctwgr%5Ef03b1bbdd9bac49f61a5d5193f5db8b17759fa12%7Ctwcon%5Es1_&ref_url=https%3A%2F%2Fpublictv.in%2Fdcp-clarification-of-cow-meat-transport-allegation-by-actress-aindrita-ray%2F