ಬೆಳಗಾವಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರೀತಿಯಲ್ಲಿ ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ಒಂದು ತಿಂಗಳಲ್ಲಿ ರಚಿಸುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಕೆ. ಪ್ರತಾಪ ಸಿಂಹ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಟೋ, ಟ್ಯಾಕ್ಸಿ, ಸರಕು ಸಾಗಾಣಿ ವಾಹನ ಚಾಲಕರು ಸೇರಿದಂತೆ ಸಾರಿಗೆ ಕ್ಷೇತ್ರದಲ್ಲಿನ ಚಾಲಕರು, ಕ್ಲೀನರ್, ಮೆಕಾನಿಕ್ ಗಳು, ಪಂಕ್ಚರ್ ಹಾಕುವವರನ್ನು ಒಳಗೊಂಡಂತೆ ಸಾರಿಗೆ ವಲಯ 35 ಲಕ್ಷ ಕಾರ್ಮಿಕರನ್ನು ಒಳಗೊಂಡಿದ್ದು, ಇವರಿಗೆ ಪ್ರತ್ಯೇಕ ಸಾರಿಗೆ ಕಲ್ಯಾಣ ಮಂಡಳಿ ರಚಿಸಲಾಗುವುದು ಎಂದು ಹೇಳಿದ್ದಾರೆ.
ಮಂಡಳಿ ರಚಿಸುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಸಾರಿಗೆ ವಲಯದ ವಾರ್ಷಿಕ ಶೇಕಡ 10 ಸೆಸ್ ನಲ್ಲಿ ಮಂಡಳಿಗೆ ಶೇಕಡ 27ರಷ್ಟು ಅಂದರೆ 274 ಕೋಟಿ ರೂ. ನೀಡಲು ಒಪ್ಪಿಗೆ ದೊರೆತಿದೆ. ಶೀಘ್ರವೇ ನಿಯಮ ರೂಪಿಸಿ ಮಂಡಳಿ ರಚನೆಗೆ ಅನುಮತಿ ಕೋರಿ ಮುಖ್ಯಮಂತ್ರಿಯಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಚಾಲಕರು, ಮೆಕಾನಿಕ್ ಗಳು ಸೇರಿದಂತೆ ಸಾರಿಗೆ ವಲಯದ 35 ಲಕ್ಷ ಕಾರ್ಮಿಕರಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.