
ನವದೆಹಲಿ: ಸಾರಿಗೆ ಸಚಿವಾಲಯವು ಸುಮಾರು 8,544 ಕಿಮೀ ಉದ್ದದ 321 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
ಲೋಕಸಭೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲಿಖಿತ ಉತ್ತರ ನೀಡಿದ್ದು, ತಮ್ಮ ಸಚಿವಾಲಯವು ಸುಮಾರು 8,544 ಕಿಮೀ ಉದ್ದದ 321 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು 1,49,758 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಂಡಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯನ್ನು ಪಿಎಂ ಗತಿ ಶಕ್ತಿ ತತ್ವದ ಮೇಲೆ ಕೈಗೊಳ್ಳಲಾಗುತ್ತದೆ. ಪ್ರಮುಖ ಆರ್ಥಿಕ, ಪ್ರವಾಸಿ ಮತ್ತು ಧಾರ್ಮಿಕ ಸಂಪರ್ಕಗಳನ್ನು ಏಕರೂಪವಾಗಿ ವೇ ಸೈಡ್ ಸೌಕರ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ ಎಂದು ತಿಳಿಸಿದ್ದಾರೆ.