ಬೆಂಗಳೂರು : ಕಾರು ಕಲಿಯಬೇಕು ಅಂದುಕೊಂಡವರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದ್ದು, ವಾಹನ ಚಾಲನಾ ತರಬೇತಿ ಶಾಲೆಗಳ ಶುಲ್ಕದಲ್ಲಿ ಭಾರೀ ಏರಿಕೆ ಮಾಡಿದೆ.
ಕಾರು ಚಾಲನೆಗೆ 4 ಸಾವಿರ ರೂ. ಶುಲ್ಕವಿದ್ದದ್ದು, ಇದೀಗ ಬರೋಬ್ಬರಿ 7 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅದರ ಜತೆಗೆ ಎಲ್ ಎಲ್‌ಗೆ 350 ರು. ಹಾಗೂ ಡಿಎಲ್‌ಗೆ 1 ಸಾವಿರ ರೂ.ಗಳನ್ನು ಸಾರಿಗೆ ಇಲಾಖೆಗೆ ಪಾವತಿಸಬೇಕಿದೆ. ಹೀಗಾಗಿ ಜ. 1ರಿಂದ ಚಾಲನಾ ಕಲಿಕೆ ಮತ್ತು ಪರವಾನಗಿಗಾಗಿ 8,350 ರೂ.ವರೆಗೆ ಹೆಚ್ಚಳವಾಗಿದೆ.
2013 ರಲ್ಲಿ ಡ್ರೈವಿಂಗ್ ಸ್ಕೂಲ್ ಗಳ ಶುಲ್ಕ ಹೆಚ್ಚಿಸಲಾಗಿತ್ತು. ಅದಾದ ನಂತರ ಶುಲ್ಕ ಹೆಚ್ಚಳಕ್ಕೆ ಸಾರಿಗೆ ಇಲಾಖೆ ಮುಂದಾಗಿರಲಿಲ್ಲ. ಹೀಗಾಗಿ ಶುಲ್ಕ ಹೆಚ್ಚಳಕ್ಕೆ ಅನುಮತಿ ಕೋರಿ ಡ್ರೈವಿಂಗ್ ಸ್ಕೂಲ್‌ಗಳು ಪದೇಪದೆ ಮನವಿ ಸಲ್ಲಿಸುತ್ತಿದ್ದವು. ಇದೀಗ ಅದಕ್ಕೆ ಸಮ್ಮತಿಸಿರುವ ಇಲಾಖೆ ಜ. 1ರಿಂದ ನೂತನ ದರದಂತೆ ಶುಲ್ಕ ಪಡೆದು ಚಾಲನಾ ತರಬೇತಿ ನೀಡಬೇಕು ಎಂದು ಸೂಚನೆ