ಬೆಂಗಳೂರು : ನಾಳೆ ಬಂದ್ ಇದ್ರೂ ಸಾರಿಗೆ ಬಸ್ ಗಳು ಸಂಚರಿಸುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ‘ಇಂದಿನ ಕಾವೇರಿ ಸಮಸ್ಯೆಗೆ ಬಿಜೆಪಿ ಕಾರಣ, ಇದನ್ನು ಪ್ರಧಾನಿ ಮೋದಿ ಪರಿಹಾರ ಮಾಡಬೇಕು. ನಾಳೆ ಎಲ್ಲಾ ಭಾಗಕ್ಕೂ ಕಡಿಮೆ ಪ್ರಮಾಣದಲ್ಲಿ ಬಸ್ ಸಂಚರಿಸಲಿದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ನಿರ್ವಹಣೆ ಮಾಡುತ್ತೇವೆ ಎಂದರು.
ಬಂದ್ ಮಾಡುವವರು ಶಾಂತಿಯುವಾಗಿ ಮಾಡಲಿ ಎಂದರು. ನಾಳೆ ಬಂದ್ ಇದ್ರೂ ಸಾರಿಗೆ ಬಸ್ ಗಳು ಸಂಚರಿಸುತ್ತದೆ, ಪ್ರಯಾಣಿಕರಿಗೆ ಯಾವುದೇ ಚಿಂತೆ ಬೇಡ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ನಾಳೆಯ ಕರ್ನಾಟಕ ಬಂದ್ ಗೆ ಖಾಸಗಿ ವಾಹನಗಳ ಒಕ್ಕೂಟ ಕೂಡ ನೈತಿಕ ಬೆಂಬಲ ನೀಡಿದೆ. ರಾಜ್ಯದಲ್ಲಿ ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲಾ ಖಾಸಗಿ ಬಸ್ ಗಳ ಸಂಚಾರ ಸೇವೆ ಬಂದ್ ಆಗಲಿದೆ.